ಹಸು ಕಳವು, ಮಂಗಳೂರಿನ ಇಬ್ಬರ ಬಂಧನ

ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು.
Published on
ಬದಿಯಡ್ಕ: ಕನ್ನೆಪ್ಪಾಡಿ ಎಂಬಲ್ಲಿ ಹಸುವನ್ನು ಕಳವು ಮಾಡಿ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ರಾಝಿಕ್ (21) ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯ ಮೊಹಮ್ಮದ್ ಇರ್ಬಾಸ್ (26) ಎಂಬುವರನ್ನು ಶುಕ್ರವಾರ ತನಿಖಾ ತಂಡ ಬಂಧಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಮೂವರಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನಕ್ಕೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ಕಾರನ್ನು ವಶಕ್ಕೆ ಪಡೆಯಲಾಗಿದೆ. ಕದ್ದ ಹಸುವನ್ನು ಉಳ್ಳಾಲದ ಕಸಾಯಿಖಾನೆಯೊಂದಕ್ಕೆ ಮಾರಾಟ ಮಾಡಿದ್ದಾಗಿ ಬಂಧಿತರು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ: ಜೂ.16ರಂದು ತಡರಾತ್ರಿ 1.30ರ ಸುಮಾರಿಗೆ ಕನ್ನೆಪ್ಪಾಡಿಯ ರಹಮತ್ ಮಂಜಿಲ್‌ನಲ್ಲಿರುವ ಕೆ.ಎಂ.ಮೊಹಮ್ಮದ್ ಅವರ ಮನೆಯ ಮುಂಭಾಗದ ಅಂಗಡಿಯ ಆವರಣದಲ್ಲಿ ಕಟ್ಟಿದ್ದ 30,000 ರೂ. ಮೌಲ್ಯದ ಹಸುವನ್ನು ಕಳವು ಮಾಡಲಾಗಿತ್ತು. ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹಸುವನ್ನು ಸಿಲೋ ಕಾರಿನಲ್ಲಿ ಕೊಂಡೊಯ್ದಿರುವುದು ಸೆರೆಯಾಗಿತ್ತು. ಅದರಂತೆ ಮನೆಯವರು ಬದಿಯಡ್ಕ ಠಾಣೆಗೆ ದೂರು ನೀಡಿದ್ದರು. ಸಿಐ ಅನೂಪ್ ಕೃಷ್ಣ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net