ವಿವಾಹ ನೋಂದಣಿ ಮಾಡಿದ ಬಳಿಕ ಹುಡುಗಿಯರ ಬ್ಯಾಂಕ್ ಖಾತೆಯಲ್ಲಿ ಸರ್ಕಾರದಿಂದ ತಲಾ 50 ಸಾವಿರ ರೂ. ನಿಖರ ಠೇವಣಿ ಇಡಲಾಗಿದ್ದು, 3 ವರ್ಷದ ಬಳಿಕ ಈ ಹಣವನ್ನು ಮಧು ಬಳಸಿಕೊಳ್ಳಬಹುದು. ಮದುವೆ ಬಳಿಕವೂ ಯುವತಿಯವರು 3 ವರ್ಷದವರೆಗೆ ಮಹಿಳಾ ನಿಲಯದ ಪರಿವೀಕ್ಷಣೆಗೆ ಒಳಪಡಲಿದ್ದಾರೆ. ಈವರೆಗೆ ಒಟ್ಟು 25 ವಿವಾಹ ಕಾರ್ಯ ನಡೆದಿದ್ದು, ಶುಕ್ರವಾರ 26 ಮತ್ತು 27ನೇ ಮದುವೆ ಸಂಭ್ರಮ. ಪ್ರಸ್ತುತ ರಾಜ್ಯ ಮಹಿಳಾ ನಿಲಯದಲ್ಲಿ 51 ಮಹಿಳೆಯರು 2 ಮಕ್ಕಳು ಆಶ್ರಯ ಪಡೆದಿದ್ದು, ನಾಲ್ವರು ಕಾಲೇಜು ವಿದ್ಯಾರ್ಥಿನಿಯರಿದ್ದಾರೆ.