ದಂಪತಿ ಹಲ್ಲೆಗೈದು, ದರೋಡೆ ಆರೋಪಿ ಬಂಧನ

Arrest
Arrest
Published on

ಕಾಸರಗೋಡು: ಮನೆ ಬಾಡಿಗೆಗೆ ಪಡೆಯುವ ಸೋಗಿಲ್ಲಿ ದಂಪತಿಯ ಕಣ್ಣಿಗೆ ಖಾರದಪುಡಿಯೆರಚಿ ಹಲ್ಲೆಗೈದು 12 ಪವನ್ ಚಿನ್ನಾಭರಣ ಹಾಗೂ 5 ಸಾವಿರ ರೂ. ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡ್ ವಾವುಂಗಾಲ್ ಆನಂದಾಶ್ರಮ ಬಳಿಯ ಏಚಿಕಾನ ನಿವಾಸಿ ರಾಜ್‌ಮೋಹನ್ (42) ಎಂಬಾತನನ್ನು ಆಲಪ್ಪುಳ ಸೌತ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಕಳೆದ ಸೋಮವಾರ ಆಲಪ್ಪುಳ ಬಳಿಯ ಕಡೆಯಾಂಕುಳಂ ಜಂಕ್ಷನ್‌ನ ಕೈದವನ ಕಣಿಯಾಂಕುಳಂನ ನಿವಾಸಿಗಳಾದ ಕೆ.ಆರ್. ಸುದರ್ಶನ್ (70) ಹಾಗೂ ಅವರ ಪತ್ನಿ ರತ್ನಕುವಾರಿ (65) ಅವರಿಗೆ ಹಲ್ಲೆಗೈದು ಚಿನ್ನಾಭರಣ ದರೋಡೆ ನಡೆಸಲಾಗಿತ್ತು. ಆರೋಪಿ ವಿರುದ್ಧ ಇತರ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿದ್ದು, ವಾರಣಕುಳಂ ನಾರ್ತ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಎರಡು ವಾರಗಳ ಹಿಂದೆಯಷ್ಟೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net