ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧ

ಉಡುಪಿಯಲ್ಲಿ ಪ.ಪೂ. ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ  'ಪ್ರಶಿಕ್ಷಣ ಕಾರ್ಯಾಗಾರ'ವನ್ನು ಮಾರುತಿ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಲೀಲಾಬಾಯಿ ಭಟ್​, ಜಗದೀಶಕುಮಾರ್​, ವರ್ಗೀಸ್​ ಪಿ. ಇದ್ದರು.
ಉಡುಪಿಯಲ್ಲಿ ಪ.ಪೂ. ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ 'ಪ್ರಶಿಕ್ಷಣ ಕಾರ್ಯಾಗಾರ'ವನ್ನು ಮಾರುತಿ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಲೀಲಾಬಾಯಿ ಭಟ್​, ಜಗದೀಶಕುಮಾರ್​, ವರ್ಗೀಸ್​ ಪಿ. ಇದ್ದರು.
Published on

'ಪ್ರಶಿಕ್ಷಣ ಕಾರ್ಯಾಗಾರ' ಸಪ್ತಾಹ ಉದ್ಘಾಟನೆ

ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ)ಯು ನಿರಂತರ ವೃತ್ತಿಪರ ತರಬೇತಿಯ ಮಹತ್ವ ಪ್ರತಿಪಾದಿಸುತ್ತದೆ. 18 ವಯೋಮಾನದ ಒಳಗಿನ ಎಲ್ಲರನ್ನೂ ಮಗುವೆಂದು ಕಾನೂನು ಪರಿಗಣಿಸಿದ್ದರಿಂದ ಅವರಿಗೆ ದೈಹಿಕ ಶಿಕ್ಷೆ ನೀಡುವುದು ಅಪರಾಧ. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಅರಿವಿಗೆ ಬಂದರೆ ತಕ್ಷಣವೇ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವುದೂ ಸಹ ನಮ್ಮ ಕರ್ತವ್ಯವಾಗಿದೆ ಎಂದು ಉಡುಪಿಯ ಡಯಟ್​ ಪ್ರಾಂಶುಪಾಲ ಡಾ.ಅಶೋಕ್​ ಕಾಮತ್​ ಮಾಹಿತಿ ನೀಡಿದರು.
ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪ.ಪೂ), ಡಯಟ್​ ಉಡುಪಿ, ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘ ಮತ್ತು ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘದ ವತಿಯಿಂದ ಸೋಮವಾರ (ನ.17) ಆಯೋಜಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ನ.17ರಿಂದ ನ.22ರ ವರೆಗೆ ನಡೆಯಲಿರುವ 13 ವಿಷಯಗಳ ಪ್ರಶಿಕ್ಷಣ ಕಾರ್ಯಾಗಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಜಿಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪ ನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ತೆಕ್ಕಟ್ಟೆ ಪ.ಪೂ. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶಾರದಾ ಹೊಳ್ಳ ಉಪಸ್ಥಿತರಿದ್ದರು. ಮೊದಲ ಎರಡು ದಿನ ಕನ್ನಡ, ಇಂಗ್ಲಿಷ್​, ಹಿಂದಿ, ರಾಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.  
ಕಾಲೇಜಿನ ಪ್ರಾಂಶುಪಾಲ ಜಗದೀಶಕುಮಾರ್​ ಸ್ವಾಗತಿಸಿದರು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಉಡುಪಿಯ ಪ್ರಾಂಶುಪಾಲೆ ಲೀಲಾಬಾಯಿ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಪ.ಪೂ. ಪ್ರಾಂಶುಪಾಲರ ಸಂಘದ ನಿಕಟಪೂರ್ವ ಅಧ್ಯಕ್ಷ ವರ್ಗೀಸ್​ ಪಿ. ವಂದಿಸಿದರು. ಮಲ್ಪೆಯ ಪ.ಪೂ. ಕಾಲೇಜಿನ ಇಂಗ್ಲಿಷ್​ ಉಪನ್ಯಾಸಕ ಎಸ್​.ಜಿ. ಭಾಗವತ್​ ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗಿನ ಅಧಿವೇಶನದಲ್ಲಿ ಡಾ. ಅಶೋಕ್​ ಕಾಮತ್​, ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯೋಗಾನರಸಿಂಹ ಸ್ವಾಮಿ ಕೆ.ಎಂ. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಮಧ್ಯಾಹ್ನದ ಅಧಿವೇಶನದಲ್ಲಿ ಕೋಟ ವಿವೇಕ ಪ.ಪೂ. ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಸದಾಶಿವ  ಹೊಳ್ಳ ಅವರು ನೀಲಿನಕ್ಷೆ, ಪತ್ರಿಕೆಯ ಮಾದರಿ ಮತ್ತು ತಯಾರಿಕೆ ಕುರಿತು ಮಾರ್ಗದರ್ಶನ ನೀಡಿದರು.
"

ಪದವಿ ಪೂರ್ವ ವಿದ್ಯಾರ್ಥಿಗಳಲ್ಲಿ ಕೌಶಲ ಅಭಿವೃದ್ಧಿ ಮಾಡುವುದು ಮತ್ತು ಅವರು ತಮ್ಮ ಮನೋಭಾವಕ್ಕೆ ಸೂಕ್ತವೆನಿಸುವ ವೃತ್ತಿ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡುವ ಹೊಣೆಗಾರಿಕೆಯೂ ಉಪನ್ಯಾಸಕರ ಮೇಲಿದೆ. ಅದಕ್ಕೆ ಇಂತಹ 'ಪ್ರಶಿಕ್ಷಣ ಕಾರ್ಯಾಗಾರ'ವು ಸಹಕಾರಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net