ಬೆಳ್ತಂಗಡಿಯಲ್ಲಿ ಕಬಡ್ಡಿ ಅಕಾಡೆಮಿ ಸ್ಥಾಪಿಸಲು ಸಹಕಾರ

 ಭಾರತ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್‌ರನ್ನು ಗೌರವಿಸಲಾಯಿತು. ಶಾಸಕ ಹರೀಶ್ ಪೂಂಜ, ಡಾ.ಪದ್ಮಪ್ರಸಾದ ಅಜಿಲ, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಇತರರಿದ್ದರು.
ಭಾರತ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್‌ರನ್ನು ಗೌರವಿಸಲಾಯಿತು. ಶಾಸಕ ಹರೀಶ್ ಪೂಂಜ, ಡಾ.ಪದ್ಮಪ್ರಸಾದ ಅಜಿಲ, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪ್ರತಿಯೊಬ್ಬನಲ್ಲೂ ವಿಭಿನ್ನ ಪ್ರತಿಭೆಯಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಬೆಳ್ತಂಗಡಿ ತಾಲೂಕಿನಲ್ಲಿ ಕಬಡ್ಡಿ ಅಕಾಡೆಮಿ ತೆರೆಯುವುದಾದರೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಭಾರತೀಯ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್ ಭರವಸೆ ನೀಡಿದರು.
ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ವತಿಯಿಂದ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಭಾನುವಾರ 24ನೇ ವರ್ಷದ ಪುಸ್ತಕ ಉಚಿತ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಕಂಪ್ಯೂಟರ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಸಚಿವ ಯು.ಟಿ. ಖಾದರ್ ಪುಸ್ತಕ, ವಸ ಹಾಗೂ ಕಂಪ್ಯೂಟರ್ ವಿತರಿಸಿ ವಾತನಾಡಿ, ಬಡತನದಲ್ಲಿ ಹುಟ್ಟಿ ಬಡತನದಲ್ಲೇ ಬದುಕು ಮುಗಿಸುವ ಕಾಲ ಈಗಿಲ್ಲ. ಎಲ್ಲರನ್ನು ಒಗ್ಗೂಡಿಸಿ ವಾಡುವ ಈ ಕೆಲಸ ವಾದರಿಯಾಗಿದೆ. ಭಾರತ ವಿಶ್ವದಲ್ಲೇ ನಂಬರ್ ಒನ್ ಆಗಬೇಕು ಎಂಬುದು ನಮ್ಮೆಲ್ಲರ ಆಸೆ. ಅದಕ್ಕಾಗಿ ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಬಲಿಷ್ಠರಾಗಬೇಕು. ತಾಳ್ಮೆ ಮತ್ತು ನಿಯತ್ತು ವಿದ್ಯಾರ್ಥಿಗಳ ಮುಖ್ಯ ಗುಣವಾಗಿರಬೇಕು. ಸಾವಾಜಿಕ ಸಮಸ್ಯೆಗಳ ಪರಿಹಾರಕ್ಕೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಎರಡೂ ಅಗತ್ಯ ಎಂದರು.
ಶಾಸಕ ಹರೀಶ್ ಪೂಂಜ ವಾತನಾಡಿ, ನಮ್ಮ ತಾಲೂಕಿನ ಯುವಕರು ಕಬಡ್ಡಿಯಲ್ಲಿ ಮಿಂಚಬೇಕು. ಅದಕ್ಕಾಗಿ ಕಬಡ್ಡಿ ಅಕಾಡೆಮಿ ಆರಂಭವಾಗಲಿ. ಇಂದು ಪಾಲಕರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿದರು. ಅಳದಂಗಡಿ ಅರಮನೆಯ ತಿಮ್ಮಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಕಬಡ್ಡಿ ಆಟಗಾರರಾದ ಸುಕೇಶ್ ಹೆಗ್ಡೆ, ಮೋಹಿತ್ ಕುವಾರ್, ಮರೋಡಿ ಶ್ರೀ ಉವಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ಅಮೆಚೂರು ಕಬಡ್ಡಿ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ರಂಜನ್ ಗೌಡ, ಬಡಗಕಾರಂದೂರು ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ದುಬೈಯ ನಾರಾಯಣ ದೇವಾಡಿಗ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುವಾರ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಸತೀಶ್ ಕಾಶಿಪಟ್ಣ ಉಪಸ್ಥಿತರಿದ್ದರು. ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಮತ್ತು ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ರಕ್ತದಾನ ಶಿಬಿರ

ನಿವತ್ತ ಸೈನಿಕರಾದ ಎಸಿಪಿ ನಾಯಕ ಸುಬೇದಾರ್ ಎನ್.ಪಿ. ತಂಗಚ್ಛನ್, ರೂಬಿನ್ ಜೋಸೆಫ್, ಪಿಯುಸಿಯಲ್ಲಿ ರ‌್ಯಾಂಕ್ ಪಡೆದ ಎಕ್ಸೆಲ್ ಕಾಲೇಜಿನ ಅಕ್ಷಯ್, ವಾಣಿ ಕಾಲೇಜಿನ ಸಮೀಕ್ಷಾ ಅಳದಂಗಡಿ, ಎಸ್ಸೆಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಅನುಗ್ರಹ ಶಾಲೆಯ ಅನನ್ಯ ಗುಡಿಗಾರ್, ವಾಣಿ ಶಾಲೆಯ ಪ್ರಾಪ್ತಿ ಎಂ. ಗೌಡ ಅವರನ್ನು ಸನ್ಮಾನಿಸಲಾಯಿತು. ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. ಕೆದ್ದುವಿನಿಂದ ದೇವಸ್ಥಾನದ ತನಕ ಅತಿಥಿಗಳೊಂದಿಗೆ ಮೆರವಣಿಗೆ ನಡೆಯಿತು. 6 ಸಾವಿರ ಮಕ್ಕಳಿಗೆ ಪುಸ್ತಕಗಳನ್ನು ಉಚಿತ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net