ಸಾಹಿತ್ಯ ಓದುವಿಕೆಯಿಂದ ಜ್ಞಾನ ಹೆಚ್ಚಳ

ಉಡುಪಿಯ ಅಜ್ಜರಕಾಡು ಕಾಲೇಜಿನಲ್ಲಿ ಎಚ್​.ಡುಂಡಿರಾಜ್​ ಅವರೊಂದಿಗೆ ಸಂವಾದ ನಡೆಯಿತು. ಪ್ರೊ. ಸೋಜನ್​ ಕೆ.ಜಿ., ಪ್ರೊ. ಪಿ.ಬಿ. ಪ್ರಸನ್ನ, ಪ್ರೊ. ನಿಕೇತನಾ ಇತರರಿದ್ದರು.
ಉಡುಪಿಯ ಅಜ್ಜರಕಾಡು ಕಾಲೇಜಿನಲ್ಲಿ ಎಚ್​.ಡುಂಡಿರಾಜ್​ ಅವರೊಂದಿಗೆ ಸಂವಾದ ನಡೆಯಿತು. ಪ್ರೊ. ಸೋಜನ್​ ಕೆ.ಜಿ., ಪ್ರೊ. ಪಿ.ಬಿ. ಪ್ರಸನ್ನ, ಪ್ರೊ. ನಿಕೇತನಾ ಇತರರಿದ್ದರು.
Published on

* ಕವಿ ಎಚ್​.ಡುಂಡಿರಾಜ್​ ಅಭಿಪ್ರಾಯ

* ಅಜ್ಜರಕಾಡು ಕಾಲೇಜಿನಲ್ಲಿ ಸಂವಾದ 

ಉಡುಪಿ: ಅಜ್ಜರಕಾಡುನಲ್ಲಿರುವ ಡಾ.ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗ ಸಾಹಿತ್ಯ ಸಂಘ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ಕವಿ ಎಚ್​.ಡುಂಡಿರಾಜ್​ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಾಲ್ಯದಿಂದಲೇ ತನ್ನಲ್ಲಿ ಸಾಹಿತ್ಯ ಆವರಿಸಿಕೊಂಡ ರೀತಿ ವಿವರಿಸಿದ ಡುಂಡಿರಾಜ್​, ಅಪಾರವಾದ ಓದು ಸಾಹಿತ್ಯದ ಆಸಕ್ತಿ ಉಳಿಯುವಂತೆ ಮಾಡಿತು. ವಿದ್ಯಾರ್ಥಿಗಳೂ ಸಾಹಿತ್ಯ ಓದುವಿಕೆಯಿಂದ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿ, ಸಂದರ್ಭಕ್ಕೆ ತಕ್ಕಂತೆ ಹನಿಗವನಗಳನ್ನು ಹೇಳುತ್ತ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.
ಕಾಲೇಜಿನ ಪ್ರಾಂಶುಪಾಲ ಸೋಜನ್​ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ತ್ರಿಶಾ ಪ್ರಾರ್ಥಿಸಿದರು. ಪ್ರೊ. ಪಿ.ಬಿ. ಪ್ರಸನ್ನ ಸ್ವಾಗತಿಸಿದರು. ಉಷಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಿಕೇತನಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net