ಕರಾವಳಿಯಲ್ಲಿ ಈ ಬಾರಿ ಮಳೆಯ ಕೊರತೆ ಆಗಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಅಂತರ್ಜಲ ಮಟ್ಟವು ಒಂದೂವರೆ ಮೀಟರ್ನಷ್ಟು ಕಡಿಮೆಯಾಗಿದೆ. ನೀರು ನಮಗೆ ಪ್ರಕೃತಿ ಕೊಟ್ಟ ವರ. ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವರಿಸಿದ್ದು, ಇದರಲ್ಲಿ ಶೇ.97 ಉಪ್ಪು ನೀರು, ಕೇವಲ ಶೇ.3ರಷ್ಟು ಮಾತ್ರ ಸಿಹಿ ನೀರು ಇದೆ. ಸಿಹಿ ನೀರಿನಲ್ಲಿ ಶೇ. 2ರಷ್ಟು ನೀರು ಮಂಜುಗಡ್ಡೆ ರೂಪದಲ್ಲಿದ್ದರೆ ಕೇವಲ ಶೇ.1ರಷ್ಟು ನೀರು ಮಾತ್ರ ಅಂರ್ಜಲ, ಕೆರೆ, ಸರೋವರದಿಂದ ಪಡೆಯಲಾಗುತ್ತಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿರುವ ನೀರನ್ನು ಕೂಡ ನಾವು ಕುಡಿಯಲು, ಕೃಷಿ, ಕೈಗಾರಿಕೆಗಳಿಗೆ ಅವೈಜ್ಞಾನಿಕವಾಗಿ ಮನಬಂದಂತೆ ಬಳಸುತ್ತಿದ್ದೇವೆ. ಇದರ ಪರಿಣಾಮ 4500 ಮಿ.ಮೀ. ಮಳೆ ಬೀಳುವ ಕರಾವಳಿಯಲ್ಲೂ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.