ವಿಜಯಾ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೆಂಕಟೇಶ್ ಹೆಬ್ಬಾರ್, ಅಧ್ಯಕ್ಷ ಕಲ್ಲಪ್ಪ ತಡವಳಗ, ಕಾರ್ಯದರ್ಶಿ ಪುಷ್ಪರಾಜ ಚೌಟ ಮೊದಲಾದವರಿದ್ದರು.
ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ರೆಡ್‌ಕ್ರಾಸ್, ರೋವರ್ಸ್ ರೇಂಜರ್ಸ್ ಸಹಯೋಗದೊಂದಿಗೆ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈಯರ್ ಸಹಕಾರದೊಂದಿಗೆ ವಿಜಯಾ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಸ್ಪಾಯರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಕೊಡುಗೆ ನೀಡಬೇಕು ಎಂದರು.
ಅಧ್ಯಕ್ಷ ಕಲ್ಲಪ್ಪ ತಡವಳಗ, ಕಾರ್ಯದರ್ಶಿ ಪುಷ್ಪರಾಜ ಚೌಟ, ವಿಜಯ ಪದವಿ ಕಾಲೇಜು ಪ್ರಾಂಶುಪಾಲೆ ಡಾ.ಶೈಲಜಾ ವೈ.ವಿ., ಪದವಿ ಪೂರ್ವ ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್ ಶುಭಹಾರೈಸಿದರು. ಪ್ರತಿಭಾ ಹೆಬ್ಬಾರ್, ಸುಧೀರ್ ಬಾಳಿಗ, ಭಾಸ್ಕರ್ ಕಾಂಚನ್ ಕಾಲೇಜು ಐಕ್ಯೂ ಎಸಿ ಕಾರ್ಡಿನೇಟರ್ ಪ್ರೊ.ದೇವದಾಸ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶರ್ಮಿಳಾ ರಾಜೇಶ್ ಹಾಗೂ ಎಲ್ಲ ಸಂಘಗಳ ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಅರುಣಕುಮಾರಿ ಕಾರ್ಯಕ್ರಮ ನಿರೂಪಿಸಿದರು.