ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರಂತರ ಪರಿಸರ ಸೇವೆ

 ರೆಖ್ಯದಲ್ಲಿ ಗಿಡಗಳ ಪೋಷಣೆ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ್, ಉಪ್ಪಿನಂಗಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಮೊದಲಾದವರಿದ್ದರು.
ರೆಖ್ಯದಲ್ಲಿ ಗಿಡಗಳ ಪೋಷಣೆ ಹಾಗೂ ಗಿಡ ನಾಟಿ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ್, ಉಪ್ಪಿನಂಗಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಮೊದಲಾದವರಿದ್ದರು.
Published on
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮೂಲ ಪರಿಸರ ಸಂರಕ್ಷಣೆಗೆ ಪೂರಕವಾಗಿ ನೀರಿಂಗಿಸುವಿಕೆ, ಜಲಾನಯನ ಕಾರ್ಯಕ್ರಮ, ಕಿಂಡಿ ಅಣೆಕಟ್ಟು ರಚನೆ, ಗಿಡಮರ ಬೆಳೆಸುವುದು, ಸ್ವಚ್ಛತಾ ಕಾರ್ಯಕ್ರಮ, ಪಶ್ಚಿಮಘಟ್ಟ ಉಳಿಸಲು ಪ್ರಯತ್ನ ಮುಂತಾದ ಕಾರ್ಯಕ್ರಮಗಳು ನಿರಂತರ ಕಳೆದ 40 ವರ್ಷಗಳಿಂದ ನಡೆಸುತ್ತಾ ಬರಲಾಗಿದೆ ಎಂದು ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ್ ಹೇಳಿದರು.
ರೆಖ್ಯ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ಮಾತನಾಡಿದರು.
ಉಪ್ಪಿನಂಗಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಶೌರ್ಯ ಘಟಕದ ಸದಸ್ಯ ಚೇತನ್, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಕೃಷ್ಣಪ್ಪ, ಬೇಬಿ ಕಿರಣ್, ಧನಂಜಯ ಶಿಬರಾಜೆ, ಗ್ರಾಮದ ಹಿರಿಯರಾದ ಆನಂದ ಗೌಡ, ಒಕ್ಕೂಟದ ಅಧ್ಯಕ್ಷರಾದ ರವೀಂದ್ರ, ಮೇಲ್ವಿಚಾರಕಿ ಪ್ರಿಯಾ, ಬೆಳ್ತಂಗಡಿ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಘಟಕದ ಸಂಯೋಜಕರಾದ ರಶ್ಮಿತಾ, ಘಟಕ ಪ್ರತಿನಿಧಿ ಆನಂದ್, ಶಿಶಿಲ ಅರಶಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸ್ವಯಂಸೇವಕರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಐದು ವರ್ಷದ ಹಿಂದೆ ನಾಟಿ ಮಾಡಲಾಗಿದ್ದ 150 ಗಿಡಗಳ ರಕ್ಷಣೆ, ಬುಡ ಮಾಡುವುದು, ಗೊಬ್ಬರ ಹಾಕುವುದು, ಅನಗತ್ಯ ಗಿಡಗಂಟಿ ತೆರವು ಮಾಡುವುದರ ಜತೆಗೆ ಹೊಸದಾಗಿ ಹಣ್ಣು ಹಂಪಲುಗಳ ಗಿಡಗಳನ್ನು ಅರಣ್ಯದಂಚಿನಲ್ಲಿ ನಾಟಿ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net