ಕ್ಷೇತ್ರದಿಂದ ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ

ಶ್ರೀ ಪರ್ಣ ಯಕ್ಷ ಬಳಗ, ತೆಕ್ಕಟ್ಟೆ ಹವ್ಯಾಸಿ ಯುವ ಯಕ್ಷಗಾನ ಸಂದ ಪ್ರಥಮ ಸೇವೆಯಾಟವನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀ ರಮಣ ಉಪಾಧ್ಯಾಯ ಉದ್ಘಾಟಿಸಿದರು.
ಶ್ರೀ ಪರ್ಣ ಯಕ್ಷ ಬಳಗ, ತೆಕ್ಕಟ್ಟೆ ಹವ್ಯಾಸಿ ಯುವ ಯಕ್ಷಗಾನ ಸಂದ ಪ್ರಥಮ ಸೇವೆಯಾಟವನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀ ರಮಣ ಉಪಾಧ್ಯಾಯ ಉದ್ಘಾಟಿಸಿದರು.
Published on
ಕೋಟ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವು ತಲತಲಾಂತರಗಳಿಂದಲೂ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕರಾವಳಿಯ ಪ್ರಮುಖ ಮೇಳಗಳಾದ ಮಂದಾರ್ತಿ, ಚೋಣಮನೆ, ಗೋಳಿಗರಡಿ ಮುಂತಾದ ಯಕ್ಷಗಾನ ಮೇಳಗಳು ನಮ್ಮ ಸೇವೆಯ ಆಟವನ್ನು ಆನೆಗುಡ್ಡೆ ದೇೀವಸ್ಥಾನದಲ್ಲಿ ನಡೆಸುತ್ತವೆ. ಅನೇಕ ಹವ್ಯಾಸಿ ಯಕ್ಷಗಾನ ಸಂಗಳು ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್‌ಗೆ ಉತ್ಸವ ಹಾಗೂ ವಿಶೇಷ ದಿನಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಿ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹೇಳಿದರು.
ದೇವಳದ ಪ್ರಸನ್ನ ಮಂಟಪ ವೇದಿಕೆಯಲ್ಲಿ ಮಿಥುನ್ ದೇವಾಡಿಗ ತೆಕ್ಕಟೆ ಸಂಚಾಲಕತ್ವದ ಶ್ರೀ ಪರ್ಣ ಯಕ್ಷ ಬಳಗ, ತೆಕ್ಕಟ್ಟೆ ಹವ್ಯಾಸಿ ಯುವ ಯಕ್ಷಗಾನ ಸಂದ ಪ್ರಥಮ ಸೇವೆಯಾಟವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಯಕ್ಷ ಸಂಟಕ ಕೊಮೆ ವೆಂಕಟೇಶ ವೈದ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮಿತ್ ಬಿ.ನೇರಳಕಟ್ಟೆ ಹಾಗೂ ರಾಜಾರಾಮ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್.ಶೆಣೈ, ದೇವಳ ವ್ಯಾನೇಜರ್ ನಟೇಶ್ ಕಾರಂತ್ ಇದ್ದರು. ಜ್ಯೋತಿ ಸಾಲಿಗ್ರಾಮ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net