ಕಾರ್ಮಿಕರ ಆಶೋತ್ತರಗಳಿಗೆ ನಿರಂತರ ಕಾಳಜಿ

 ಶಾಸಕಿ ಭಾಗೀರಥಿ ಮುರುಳ್ಯ ಬಿಎಂಎಸ್ ದಿನಾಚರಣೆ ಉದ್ಘಾಟಿಸಿದರು. ಕುಮಾರನಾಥ ಶೆಟ್ಟಿ ಉಜಿರೆ, ಸಾಂತಪ್ಪ ಧರ್ಮಸ್ಥಳ, ಚಂದ್ರಶೇಖರ ತುಂಬಿಮನೆ ಮೊದಲಾದವರು ಇದ್ದರು.
ಶಾಸಕಿ ಭಾಗೀರಥಿ ಮುರುಳ್ಯ ಬಿಎಂಎಸ್ ದಿನಾಚರಣೆ ಉದ್ಘಾಟಿಸಿದರು. ಕುಮಾರನಾಥ ಶೆಟ್ಟಿ ಉಜಿರೆ, ಸಾಂತಪ್ಪ ಧರ್ಮಸ್ಥಳ, ಚಂದ್ರಶೇಖರ ತುಂಬಿಮನೆ ಮೊದಲಾದವರು ಇದ್ದರು.
Published on
ಕಡಬ: ಕಾರ್ಮಿಕರ ಆಶೋತ್ತರಗಳಿಗೆ ನಿರಂತರ ಕಾಳಜಿ ವಹಿಸಿ ಸರ್ಕಾರದಿಂದ ಸಿಗುವ ಸವಲತ್ತು ಕಾರ್ಮಿಕರ ಮನೆಬಾಗಿಲಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಭಾರತೀಯ ಮಜ್ದೂರು ಸಂಘಟನೆ ನಿರ್ವಹಿಸುತ್ತಿದೆ. ಸಂಘಟನೆಯ ಇಂತಹ ಮಹತ್ತರ ಕಾರ್ಯವನ್ನು ಇನ್ನಷ್ಟು ಕಾರ್ಮಿಕರಿಗೆ ಸದಸ್ಯರು ಪರಿಚಯಿಸುವ ಮೂಲಕ ಸಂಘಟನೆಗೆ ಶಕ್ತಿ ತುಂಬಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕಡಬ ಶ್ರೀ ದುಗಾರ್ಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಭಾನುವಾರ ಭಾರತೀಯ ಮಜ್ದೂರು ಸಂಘ ಕಡಬ ತಾಲೂಕು ಸಮಿತಿಯ ಬಿಎಂಎಸ್ ಸ್ಥಾಪನಾ ದಿನಾಚರಣೆ ಮತ್ತು ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಎಂಎಸ್ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಉಜಿರೆ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಂತಪ್ಪ ಧರ್ಮಸ್ಥಳ ಕಲ್ಮಂಜ, ಬಿಎಂಎಸ್ ಕಡಬ ತಾಲೂಕು ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ಕೊಲ್ಪೆ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ಇಂಜಿನಿಯರ್‌ಗಳಾದ ಶಿವಣ್ಣ ಪಿ.ಹೆಗ್ಡೆ ನೆಲ್ಯಾಡಿ, ಚಂದ್ರಹಾಸ ಪನ್ಯಾಡಿ ಅವರನ್ನು ಸನ್ಮಾನಿಸಲಾಯಿತು.
ಕಟ್ಟಡ ಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನೂತನ ಕಾರ್ಮಿಕ ಸದಸ್ಯರ ಕಾರ್ಡ್ ವಿತರಿಸಲಾಯಿತು. ವಿದ್ಯಾರ್ಥಿನಿ ಲಕ್ಷಾ ಅನಿಸಿಕೆ ವ್ಯಕ್ತಪಡಿಸಿದರು. ಬಿಎಂಎಸ್ ಕಡಬ ತಾಲೂಕು ಸಮಿತಿ ಅಧ್ಯಕ್ಷ ಚಂದ್ರಶೇಖರ ತುಂಬಿಮನೆ ಅಧ್ಯಕ್ಷತೆ ವಹಿಸಿದ್ದರು. ಜತೆ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಲ್ಯ ವಂದಿಸಿದರು. ಧನಂಜಯ ಕೊಡಂಗೆ, ಜನಾರ್ದನ ಗೌಡ ಅರಿಗ, ಭವ್ಯಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net