

ಕಮರ್ಷಿಯಲ್ ಸಿಲಿಂಡರ್ ಇಲ್ಲದೆ ಹೋಟೆಲ್ ಉದ್ಯಮ ಹಿನ್ನಡೆ ಅನುಭವಿಸುತ್ತಿದೆ. ಶೇ.60ರಷ್ಟು ಸಣ್ಣ-ಮಧ್ಯಮ ಹೋಟೆಲ್ಗಳು ಬಂದ್ ಆಗಿವೆ. ವಾರದೊಳಗೆ ಭಾರತಕ್ಕೆ ತೈಲ ಸ್ಟೀಮರ್ ಬರಲಿದೆ ಎಂದು ಹೋಟೆಲ್ ಮಾಲೀಕರ ರಾಜ್ಯ ಸಂಘಟನೆಗೆ ಸರ್ಕಾರ ಮಾಹಿತಿ ನೀಡಿದೆ. ಬೇರೆ ಸ್ಥಳಾವಕಾಶ ಇರುವ ಕೆಲವು ಹೋಟೆಲ್ಗಳು ಅತ್ಯಂತ ಪ್ರಯಾಸದಿಂದ ಕಟ್ಟಿಗೆ ಒಲೆ ಮೂಲಕ ಆಹಾರೋತ್ಪನ್ನ ತಯಾರಿಸುತ್ತಿವೆ. ವಾಣಿಜ್ಯ ಅಡುಗೆ ಅನಿಲದ ಸಮಸ್ಯೆ ಸದ್ಯ ದೇಶವ್ಯಾಪಿ ಇರುವುದರಿಂದ ಪರಿಹಾರ ಸಿಗುವವವರೆಗೆ ಇದೇ ಪರಿಸ್ಥಿತಿ ಎದುರಿಸುವುದು ಅನಿವಾರ್ಯ ಆಗಿದೆ.