ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಹಿಂಜರಿಯಬಾರದು. ಉತ್ತಮ ಪೋರ್ಟ್‌ಫೋಲಿಯೊ ನಿರ್ಮಾಣ, ನಿರಂತರ ಕಲಿಕೆ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಆಧರಿಸಿದ ಕಥೆಗಳೇ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಳ್ಳಲು ನೆರವಾಗುತ್ತವೆ. ಪ್ರತಿಯೊಂದು ದೃಶ್ಯವೂ ಸೂಕ್ತ ಯೋಜನೆಯೊಂದಿಗೆ ರೂಪುಗೊಳ್ಳಬೇಕಿದ್ದು, ಸುತ್ತಮುತ್ತಲಿನ ಬದುಕು ಮತ್ತು ಸಮಕಾಲೀನ ಘಟನೆಗಳೇ ಉತ್ತಮ ಕಥೆಗಳ ಮೂಲವಾಗಬಹುದು ಎಂದು ಹೈದರಾಬಾದ್‌ನ ‘ಲೈಟ್ಸ್ ಕ್ಯಾಮೆರಾ ವುಮನ್’ ಸಂಸ್ಥೆಯ ಸಂಸ್ಥಾಪಕಿ ಹಾಗೂ ಚಲನಚಿತ್ರ ನಿರ್ದೇಶಕಿ ನವ್ಯಾ ನಾಗೇಶ್ ಹೇಳಿದರು.