ರೈತರು ಪ್ರಗತಿಯಾದರೆ ದೇಶ ಸಂಪದ್ಭರಿತ

ಉಡುಪಿ ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಕಾರ್ಯಾಲಯದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಾಯಿ ರೆಡ್ಡಿ ಮಾತನಾಡಿದರು. ರಮೇಶ್​ ರಾಜು, ಸೋಮಶೇಖರ್​, ಪುಟ್ಟಸ್ವಾಮಿ, ನವೀನ್​ಚಂದ್ರ ಜೈನ, ಶ್ರೀನಿವಾಸ ಭಟ್​, ಸತ್ಯನಾರಾಯಣ ಉಡುಪ ಇದ್ದರು.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಕಾರ್ಯಾಲಯದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಾಯಿ ರೆಡ್ಡಿ ಮಾತನಾಡಿದರು. ರಮೇಶ್​ ರಾಜು, ಸೋಮಶೇಖರ್​, ಪುಟ್ಟಸ್ವಾಮಿ, ನವೀನ್​ಚಂದ್ರ ಜೈನ, ಶ್ರೀನಿವಾಸ ಭಟ್​, ಸತ್ಯನಾರಾಯಣ ಉಡುಪ ಇದ್ದರು.
Published on

* ಭಾ.ಕಿ.ಸಂ.ದ ರಾಷ್ಟ್ರೀಯ ಅಧ್ಯಕ್ಷ ಸಾಯಿ ರೆಡ್ಡಿ ಅನಿಸಿಕೆ

* ಉಡುಪಿ ಜಿಲ್ಲಾ ಸಂಘದಲ್ಲಿ ಸಮಾಲೋಚನಾ ಸಭೆ

ಉಡುಪಿ: ಭಾರತೀಯ ಕಿಸಾನ್​ ಸಂಘವು ಅಖಿಲ ಭಾರತ ಮಟ್ಟದ ರೈತ ಸಂಘಟನೆಯಾಗಿದ್ದು, ದೇಶಾದ್ಯಂತ ಸುಮಾರು 82 ಸಾವಿರ ಗ್ರಾಮಗಳಲ್ಲಿ ಸಮಿತಿಯಿದೆ. ರಾಷ್ಟ್ರಮಟ್ಟದಲ್ಲಿ ರಾಜಕೀಯ ರಹಿತ ಅತಿದೊಡ್ಡ ರೈತಶಕ್ತಿ ಇದಾಗಿದ್ದು, ಸಂಘಟನೆಯ ಬೇರು ಗ್ರಾಮಗಳಲ್ಲಿದೆ. ರೈತರೆಲ್ಲರೂ ಸಂಘಟಿತರಾಗಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸ್ವಾವಲಂಬಿಗಳಾಗಿ ಆರ್ಥಿಕ ಪ್ರಗತಿ ಹೊಂದಬೇಕು. ಆಗಲೇ ಭಾರತ ದೇಶ ಸಂಪದ್ಭರಿತವಾಗಲು ಸಾಧ್ಯ ಎಂದು ಭಾರತೀಯ ಕಿಸಾನ್​ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿ ರೆಡ್ಡಿ ತಿಳಿಸಿದರು.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್​ ಸಂಘದ ಕಾರ್ಯಾಲಯದಲ್ಲಿ ನಡೆದ ಸಂಘಟನೆಯ ಜಿಲ್ಲಾ ಸ್ಥರದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕೃಷಿ ಉಳಿಸೋಣ
2029ಕ್ಕೆ ಭಾರತೀಯ ಕಿಸಾನ್​ ಸಂಘ ಪ್ರಾರಂಭವಾಗಿ 50 ವರ್ಷ  ಪೂರ್ಣಗೊಳ್ಳಲಿದೆ. ಇದಕ್ಕೂ ಮೊದಲು ದೇಶದ ಎಲ್ಲ ಗ್ರಾಮಗಳಲ್ಲಿ ಸಂಘಟನೆ ರಚಿಸಿ, ರೈತರನ್ನ ಅರ್ಥಿಕ ಸ್ಥಿತಿ ಸುಧಾರಿಸಬೇಕಿದೆ. ಈ ದೇಶದ ಬೆನ್ನೆಲುಬಾದ ಕೃಷಿಯನ್ನು ಮತ್ತೊಮ್ಮೆಗರಿಷ್ಠ ಮಟ್ಟಕ್ಕೆ ಬೆಳೆಸುವ ಹೊಣೆ ನಮ್ಮೆಲ್ಲ ಕಾರ್ಯಕರ್ತರ ಮೇಲಿದೆ. ಉಡುಪಿ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಟನೆಯು ನೇರವಾಗಿ ಸರ್ಕಾರಗಳೊಂದಿಗೂ ಸಮಾಲೋಚನೆ ನಡೆಸುತ್ತಿದೆ. ಜಿಲ್ಲೆಯಲ್ಲಿ ಸಂಘಟನೆಯ ಬಲ ಹೆಚ್ಚಿಸಲು ತಾವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡಬೇಕು ಎಂದರು.
ಭಾ.ಕಿ.ಸಂ. ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರಮೇಶ್​ ರಾಜು, ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್​, ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ ಮಾತನಾಡಿದರು.
ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ನವೀನ್​ಚಂದ್ರ ಜೈನ, ಉಪಾಧ್ಯಕ್ಷ ಶ್ರೀನಿವಾಸ ಭಟ್​, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ವಂದಿಸಿದರು.
"

ಉಡುಪಿಯಲ್ಲಿ ಈ ಬಾರಿ ಮಳೆಯ ಪ್ರಮಾಣ ಪ್ರಾರಂಭದಲ್ಲಿಯೇ ಗಣನೀಯವಾಗಿಕಡಿಮೆಯಾಗಿದ್ದು, ಕೃಷಿ ಚಟುವಟಿಕೆ ಇನ್ನೂ ವೇಗ ಪಡೆದಿಲ್ಲ. ಕಾಡುಪ್ರಾಣಿಗಳ ಸಮಸ್ಯೆ, ಕಾರ್ಮಿಕರ ಕೊರತೆ, ದುಬಾರಿ ಕೂಲಿಯಿಂದಾಗಿ ಕೃಷಿಗೆ ಹಿನ್ನಡೆಯಾಗುತ್ತಿದೆ. ಇದಕ್ಕೆ ರೈತರು, ವಿಜ್ಞಾನಿಗಳು ಹಾಗೂ ಸರ್ಕಾರಗಳು ಪರ್ಯಾಯ ಮಾಗೋರ್ಪಾಯ ಕಂಡುಕೊಳ್ಳಬೇಕಾದ ಅಗತ್ಯತೆಯಿದೆ.

— ಸಾಯಿ ರೆಡ್ಡಿ. ಭಾರತೀಯ ಕಿಸಾನ್​ ಸಂಘದ ರಾಷ್ಟ್ರೀಯ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net