ಗ್ರಾಹಕ ಆಯೋಗದ ಆದೇಶ ಉಲ್ಲಂಘಿಸಿದ ಕಾಂಗ್ರೆಸ್​ ಮುಖಂಡ ಬಂಧನ

ಕಾಂಗ್ರೆಸ್​ ಮುಖಂಡ ಅಮೃತ್​ ಶೆಣೈ
ಕಾಂಗ್ರೆಸ್​ ಮುಖಂಡ ಅಮೃತ್​ ಶೆಣೈ
Published on
ಉಡುಪಿ: ಗ್ರಾಹಕರ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕಾಂಗ್ರೆಸ್​ ಮುಖಂಡ ಅಮೃತ್​ ಶೆಣೈ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಮೃತ್​ ಶೆಣೈ ಮಾಲೀಕತ್ವದ ಬಹುಮಹಡಿ ಸಮುಚ್ಚಯದಲ್ಲಿ ಸಂತೋಷ್​ ಪೈ ಎಂಬುವವರು ್ಲಾಟ್​ ಖರೀದಿಸಿದ್ದರು. ಆದರೆ ಮನೆಯನ್ನು ನೋಂದಾಯಿಸಿ ಕೊಟ್ಟಿರಲಿಲ್ಲ. ಈ ಬಗ್ಗೆ ಸಂತೋಷ್​ ಪೈ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾವೆ ಹೂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಆಯೋಗ ವೈಗರ್​ ಅಪಾರ್ಟ್​ಮೆಂಟ್​ನಲ್ಲಿನ ಮನೆ ನಂಬ್ರ 304 ದೂರುದಾರರ ಹೆಸರಿಗೆ ರಿಜಿಸ್ಟ್ರೆಶನ್​ ಮಾಡಿಕೊಡಬೇಕು. ಇಲ್ಲದಿದ್ದರೆ ಶೇ. 9 ಬಡ್ಡಿಯೊಂದಿಗೆ 27,20,000 ರೂ. ಮರುಪಾವತಿಸಬೇಕು ಎಂದು ಆದೇಶಿಸಿತ್ತು. ಆದರೆ ಅಮೃತ್​ ಶೆಣೈ ಆಯೋಗದ ಈ ಆದೇಶವನ್ನು ಪಾಲಿಸಿರಲಿಲ್ಲ. ಕೋರ್ಟ್​ ಆದೇಶ ಜಾರಿಯಾಗದ ಕಾರಣ ಅರ್ಜಿದಾರ ಸಂತೋಷ್​ ಪೈ ಅವರು ಅಮೃತ್​ ಶೆಣೈ ವಿರುದ್ಧ ದಾವೆ ಹೂಡಿದ್ದರು. ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದರಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ ಆಯೋಗವು, ರೋಪಿಗೆ 3 ವರ್ಷ ಸಾದಾ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ತದನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅರೆಸ್ಟ್​ ವಾರಂಟ್​ ಹೊರಡಿಸಲಾಗಿತ್ತು.
ಹಿರಿಯಡ್ಕ ಕಾರಾಗೃಹಕ್ಕೆ ಶಿಫ್ಟ್​
ನ್ಯಾಯಾಲಯದ ವಾರಂಟ್​ನಂತೆ ಗುರುವಾರ ಆರೋಪಿ ಅಮೃತ್​ ಶೆಣೈ ಅವರನ್ನು ಆಯೋಗದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಆಯೋಗವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದು, ಅದರಂತೆ ಹಿರಿಯಡ್ಕ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
ಚಿತ್ರ
ಯುಡಿಪಿ&25&ಅಮೃತ್​ ಶೆಣೈ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net