ಶಿಕ್ಷಣದಿಂದ ಸಮಾಜದ ಸಮಗ್ರ ಅಭಿವೃದ್ಧಿ

ಉಪ್ಪುಂದ ದೇವಾಡಿಗರ ಸಂದಿಂದ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಪ್ರಮುಖರಾದ ಆಲೂರು ರುರಾಮ ದೇವಾಡಿಗ, ರಾಮಚಂದ್ರ ದೇವಾಡಿಗ, ರಮೇಶ ದೇವಾಡಿಗ ವಂಡ್ಸೆ ಮೊದಲಾದವರಿದ್ದರು.
ಉಪ್ಪುಂದ ದೇವಾಡಿಗರ ಸಂದಿಂದ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಪ್ರಮುಖರಾದ ಆಲೂರು ರುರಾಮ ದೇವಾಡಿಗ, ರಾಮಚಂದ್ರ ದೇವಾಡಿಗ, ರಮೇಶ ದೇವಾಡಿಗ ವಂಡ್ಸೆ ಮೊದಲಾದವರಿದ್ದರು.
Published on
ಬೈಂದೂರು: ಶಿಕ್ಷಣದಿಂದ ಸವಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜದ ಭವಿಷ್ಯವನ್ನು ರೂಪಿಸುವ ಅತ್ಯಂತ ಶಕ್ತಿಯುತ ಸಾಧನ ಶಿಕ್ಷಣ. ಆ ಶಿಕ್ಷಣದ ಬೆಳಕು ಸವಾಜದ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಬೇಕು ಎಂದು ಕೊಲ್ಲೂರು ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯ ಆಲೂರು ರಾಮ ದೇವಾಡಿಗ ಹೇಳಿದರು.
ಉಪ್ಪುಂದ ದೇವಾಡಿಗರ ಸಂ ವತಿಯಿಂದ ಉಪ್ಪುಂದದಲ್ಲಿ ಮೊದಲ ಬಾರಿಗೆ ಸವಾಜದ ಶೈಕ್ಷಣಿಕ ಪ್ರಗತಿ ಮತ್ತು ಪ್ರತಿಭೆಗಳ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾದ ಪುಸ್ತಕ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷ ರಾಮಚಂದ್ರ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಶೈಕ್ಷಣಿಕ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು.
ಬೆಂಗಳೂರು ದೇವಾಡಿಗ ಸಂದ ಅಧ್ಯಕ್ಷ ರಮೇಶ ದೇವಾಡಿಗ ವಂಡ್ಸೆ, ಖಜಾಂಚಿ ಎಸ್.ಎಂ.ಚಂದ್ರ ದೇವಾಡಿಗ, ಜತೆ ಕಾರ್ಯದರ್ಶಿ ಶಿವಶಂಕರ ಆರ್.ದೇವಾಡಿಗ, ಉದ್ಯಮಿ ಯು.ಎ.ಮಂಜು ದೇವಾಡಿಗ, ಮಹಿಳಾ ಟಕದ ಅಧ್ಯಕ್ಷೆ ಗಿರಿಜಾ ದೇವಾಡಿಗ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ರವೀಂದ್ರ ದೇವಾಡಿಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಸುಧಾಕರ ದೇವಾಡಿಗ ನಿರೂಪಿಸಿದರು. ಜತೆ ಕಾರ್ಯದರ್ಶಿ ದೇವರಾಯ ದೇವಾಡಿಗ ವಂದಿಸಿದರು.
------ಫೋಟೋ------
ಬಿವೈಎನ್-ಜೂನ್-20-1
ಉಪ್ಪುಂದ ದೇವಾಡಿಗರ ಸಂದಿಂದ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಬ್ಯಾಗ್ ವಿತರಿಸಲಾಯಿತು. ಪ್ರಮುಖರಾದ ಆಲೂರು ರುರಾಮ ದೇವಾಡಿಗ, ರಾಮಚಂದ್ರ ದೇವಾಡಿಗ, ರಮೇಶ ದೇವಾಡಿಗ ವಂಡ್ಸೆ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net