ಶ್ವಾಸಕೋಶದ ಆಮ್ಲಜನಕವನ್ನು ನಿರಂತರ ಕಾಯ್ದುಕೊಳ್ಳಲು ಆಪರೇಷನ್ ಮುಗಿಯುವವರೆಗೂ ವೆಂಟಿಲೇಟರ್ ಕೊಳವೆ ಬಳಸಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕಾರ್ಯವಾಗಿತ್ತು. ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ರೋಗಿಗೆ ಎದೆಯ ಮೇಲೆ ದೊಡ್ಡ ರಂಧ್ರ ಮಾಡಬೇಕಿತ್ತು. ಅದರಿಂದಾಗಿ ಹೆಚ್ಚಿನ ನೋವು, ಚೇತರಿಕೆಗೆ ದೀರ್ಘ ಸಮಯ ಬೇಕಾಗುತ್ತಿತ್ತು. ಅಲ್ಲದೆ, ಎದೆಯಮೇಲೆ ಎದ್ದು ಕಾಣುವಂತೆ ಗಾಯದ ದೊಡ್ಡ ಗುರುತು ಇರುತ್ತಿತ್ತು. ಆದರೆ, ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದಾಗಿ ರೋಗಿಯು ಬೇಗನೆ ಚೇತರಿಸಿಕೊಂಡಿದ್ದು, ಚಿಕಿತ್ಸೆಯಾದ ನಾಲ್ಕನೇ ದಿನದಲ್ಲಿ ಬಿಡುಗಡೆ ಮಾಡಲಾಗಿದೆ.