ಕುರುಡಪದವು ರಸ್ತೆ ಶೀಘ್ರ ಪೂರ್ಣಗೊಳಿಸಿ

 ಲಾಲ್‌ಬಾಗ್-ಚಿಪ್ಪಾರ್-ಕುರುಡಪದವು ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದು.
ಲಾಲ್‌ಬಾಗ್-ಚಿಪ್ಪಾರ್-ಕುರುಡಪದವು ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದು.
Published on
ಕಾಸರಗೋಡು: ಕೇಂದ್ರ ಸರ್ಕಾರದ ಅನುದಾನ ಬಳಸಿ ನಿರ್ಮಿಸುವ ಯೋಜನೆಗಳನ್ನು ತನ್ನದೆಂದು ಬಿಂಬಿಸಿ ಲಾಭ ಪಡೆದುಕೊಳ್ಳಲು ಕೇರಳ ಸರ್ಕಾರ ಪ್ರಯತ್ನಿಸುತ್ತಿದೆ. ಅದರ ಬದಲಾಗಿ ರಾಜ್ಯದ ಲೋಕೋಪಯೋಗಿ ಮತ್ತು ಸ್ಥಳೀಯಾಡಳಿತ ಇಲಾಖೆಯ ಯೋಜನೆಗಳನ್ನು ಸಕಾಲದಲ್ಲಿ ಪೂರ್ತಿಗೊಳಿಸಲು ಗಮನಹರಿಸಲಿ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಆಗ್ರಹಿಸಿದರು.
ಅರ್ಧಕ್ಕೆ ಸ್ಥಗಿತಗೊಂಡಿರುವ ಪೈವಳಿಕೆ ಪಂಚಾಯಿತಿಯ ಲಾಲ್‌ಬಾಗ್-ಚಿಪ್ಪಾರ್-ಕುರುಡಪದವಿನ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಯೋಜನೆಯನ್ನು ಪಿಣರಾಯಿ ವಿಜಯನ್ ಸರ್ಕಾರದ ಸಾಧನೆ ಎಂದು ಬಿಂಬಿಸುತ್ತಿರುವ ಎಡರಂಗ ಸರ್ಕಾರ, ತನ್ನದೇ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಪೂರ್ಣಗೊಳಿಸಲಾಗದೆ ನನೆಗುದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಒಂದೂವರೆ ವರ್ಷದ ಹಿಂದೆ ಟೆಂಡರ್ ಮಾಡಲಾದ ಲಾಲ್‌ಬಾಗ್-ಚಿಪ್ಪಾರ್-ಕುರುಡಪದವು ರಸ್ತೆ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಶೀಘ್ರ ಪೂರ್ಣವಾಗದಿದ್ದರೆ ಜನಾಂದೋಲನ ನಡೆಸಲಾಗುವುದು ಎಂದು ಎಂ.ಎಲ್.ಅಶ್ವಿನಿ ಎಚ್ಚರಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಪೈವಳಿಕೆ ನಾರ್ತ್ ಏರಿಯಾ ಅಧ್ಯಕ್ಷ ಸತ್ಯಶಂಕರ ಭಟ್, ಕಾರ್ಯದರ್ಶಿ ಪ್ರವೀಣ ಪಟ್ಲ, ಸೌತ್ ಏರಿಯಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೀರ್ತಿ ಭಟ್, ಗ್ರಾ.ಪಂ. ಸದಸ್ಯರಾದ ಸುಮನಾ ಜಿ.ಭಟ್, ರಾಮ ಏದಾರ್, ರಾಮಕೃಷ್ಣ ಬಿ.ಕೆ., ಗಣೇಶ್ ಪ್ರಸಾದ್, ಸುಜಾತಾ, ಗೋಪಾಲ ಸಫಲ್ಯ, ಸಲೀಲ್ ಮಾಸ್ಟರ್, ಬಾಲಕೃಷ್ಣ, ವಿಶ್ವನಾಥ ಮಾಣಿಪ್ಪಾಡಿ ಮೊದಲಾದವರು ಜತೆಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net