ಚಿಟ್ಪಾಡಿ ಮುಖ್ಯ ರಸ್ತೆ ಕಾಮಗಾರಿ ತ್ವರಿತ ಮುಗಿಸಿ

ಉಡುಪಿ ಬೈಲೂರು ವಾರ್ಡ್​ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚರಂಡಿ ಹಾಗೂ ರಸ್ತೆ ಕಾಮಗಾರಿಯನ್ನು ಯಶ್​ಪಾಲ್​ ಸುವರ್ಣ ಪರಿಶೀಲಿಸಿದರು. ಕಿರಣಕುಮಾರ್​ ಬೈಲೂರು, ದಿನೇಶ ಅಮೀನ್​, ರತ್ನಾಕರ ಶೇರಿಗಾರ, ವಸಂತರಾಜ ಚಂದನ ಇನ್ನಿತರರಿದ್ದರು.
ಉಡುಪಿ ಬೈಲೂರು ವಾರ್ಡ್​ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚರಂಡಿ ಹಾಗೂ ರಸ್ತೆ ಕಾಮಗಾರಿಯನ್ನು ಯಶ್​ಪಾಲ್​ ಸುವರ್ಣ ಪರಿಶೀಲಿಸಿದರು. ಕಿರಣಕುಮಾರ್​ ಬೈಲೂರು, ದಿನೇಶ ಅಮೀನ್​, ರತ್ನಾಕರ ಶೇರಿಗಾರ, ವಸಂತರಾಜ ಚಂದನ ಇನ್ನಿತರರಿದ್ದರು.
Published on: 

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ತಾಕೀತು

* ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ, ಪರಿಶೀಲನೆ

ಉಡುಪಿ: ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿವರೆಗಿನ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ವ್ಯಾಪಕ ಧೂಳು ಆವರಿಸುತ್ತಿದ್ದು ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯಶ್​ಪಾಲ್​ ಸುವರ್ಣ ತಾಕೀತು ಮಾಡಿದರು.

ಬೈಲೂರು ವಾರ್ಡ್​ ವ್ಯಾಪ್ತಿಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ತೆರಳಿ, ಪರಿಶೀಲಿಸಿ ಮಾತನಾಡಿದರು.

ನಗರಸಭಾ ನಿಧಿಯಿಂದ 97 ಲಕ್ಷ ರೂ. ವೆಚ್ಚದಲ್ಲಿ ಪಿಪಿಸಿ ಕಾಲೇಜ್​, ಅಮ್ಮಣ್ಣಿ ರಾಮಣ್ಣ ಸಭಾಭವನದಿಂದ ಚಿಟ್ಪಾಡಿ ಭಾಗದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕಾಮಗಾರಿ ನಡೆಯುತ್ತಿದೆ. ಆದರೆ, ಕೆಲವು ಭಾಗಗಳಲ್ಲಿ ಬಂಡೆ ಅಡ್ಡಿಯಾಗಿದ್ದರಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆದು ಸಮಸ್ಯೆ ಉಂಟಾಗಿದೆ. ಇದೀಗ ಮಳೆ ಪ್ರಮಾಣವೂ ಕಡಿಮೆಯಾಗಿದ್ದು, ತಕ್ಷಣ ಮುಖ್ಯ ರಸ್ತೆ ಡಾಂಬರೀಕರಣ ಕೆಲಸ ನಡೆಸಬೇಕು. ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ಉಡುಪಿ ನಗರಸಭಾ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಕಿರಣಕುಮಾರ್​ ಬೈಲೂರು, ನಗರ ಬಿಜೆಪಿ ಅಧ್ಯಕ್ಷ ದಿನೇಶ ಅಮೀನ್​, ಪ್ರಮುಖರಾದ ರತ್ನಾಕರ ಶೇರಿಗಾರ, ವಸಂತರಾಜ ಚಂದನ, ರಮೇಶ, ರಂಜಿತ, ನಿತಿನ್​ ಪೈ, ಮನ್ಸುಖ್​ ಲಾಲ್​ ಪಟೇಲ, ನಗರಸಭೆಯ ಇಂಜಿನಿಯರ್​ ದಿವಾಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.