ಇತರರೊಂದಿಗೆ ಮಕ್ಕಳ ಹೋಲಿಕೆ ಸಲ್ಲದು

 ಪಾಲಕರ ಸಭೆಯಲ್ಲಿ ನಿವೃತ್ತ ಮುಖ್ಯಶಿಕ್ಷಕ ರಮೇಶ್ ಮಯ್ಯ ಮಾತನಾಡಿದರು. ಜಯರಾಮ ಮಯ್ಯ, ರಾಜೇಶ್ ಕುರ್ಕಿಲ ಮೊದಲಾದವರಿದ್ದರು.
ಪಾಲಕರ ಸಭೆಯಲ್ಲಿ ನಿವೃತ್ತ ಮುಖ್ಯಶಿಕ್ಷಕ ರಮೇಶ್ ಮಯ್ಯ ಮಾತನಾಡಿದರು. ಜಯರಾಮ ಮಯ್ಯ, ರಾಜೇಶ್ ಕುರ್ಕಿಲ ಮೊದಲಾದವರಿದ್ದರು.
Published on
ಬೆಳ್ತಂಗಡಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದಷ್ಟೇ ಪಾಲಕರ ಪಾತ್ರ ಮುಖ್ಯವಾಗಿರುತ್ತದೆ. ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡದೆ ಸಂಸ್ಕೃತಿ- ಸಂಸ್ಕಾರ ಕಲಿಸಿದಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ರಮೇಶ್ ಮಯ್ಯ ಅಭಿಪ್ರಾಯಪಟ್ಟರು.

ಬೆಳಾಲು ಎಸ್‌ಡಿಎಂ ಅನುದಾನಿತ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ಶಿಕ್ಷಕ-ರಕ್ಷಕ ಸಂಘ ರಚನೆ ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದರು.
ಅಧ್ಯಕ್ಷರಾಗಿ ಪ್ರಮೀಳಾ, ಉಪಾಧ್ಯಕ್ಷರಾಗಿ ಯಶೋಧರ, ಸದಸ್ಯರಾಗಿ ಮೋಹನ್, ಪುಟ್ಟಣ್ಣ, ಶೀಲಾವತಿ, ಅರುಣಾಕ್ಷಿ, ಸುರೇಶ ಮತ್ತು ಶ್ವೇತಾ, ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕ ಜಯರಾಮ ಮಯ್ಯ ಮತ್ತು ಜತೆ ಕಾರ್ಯದರ್ಶಿಯಾಗಿ ಶಿಕ್ಷಕ ಕಿರಣ್ ಆಯ್ಕೆಯಾದರು.
ಮುಖ್ಯಶಿಕ್ಷಕ ಜಯರಾಮ ಮಯ್ಯ ಶಾಲೆಯಲ್ಲಿರುವ ಸೌಲಭ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ಪಾಲಕರಿಗೆ ಮಾಹಿತಿ ನೀಡಿದರು. ಶಿಕ್ಷಕಿ ಕೋಕಿಲ 2025-26ನೇ ಸಾಲಿನ ವರದಿ ವಾಚಿಸಿದರು.
ಶಿಕ್ಷಕ ರಕ್ಷಕ-ಸಂಘದ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಕುರ್ಕಿಲ, ಶಿಕ್ಷಕರು ಉಪಸ್ಥಿತರಿದ್ದರು. ರವಿಚಂದ್ರ ಜೈನ್ ಕಾರ್ಯಕ್ರಮ ಸಂಘಟಿಸಿದರು. ಶಿಕ್ಷಕರಾದ ಕಿರಣ್ ಸ್ವಾಗತಿಸಿ, ಕೃಷ್ಣಾನಂದ ವಂದಿಸಿದರು. ಸುಮನ್ ಯು.ಎಸ್. ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net