ಮಣಿಪಾಲ, ಉಡುಪಿ ಹಾಗೂ ಮಲ್ಪೆಯ ವಿವಿಧ ವಾರ್ಡ್ಗಳಲ್ಲಿ ಸುಮಾರು 10 ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದ್ದು, ಅದನ್ನರಿತ ಜನರು ಬೇರೆಡೆ ಕಸ ಎಸೆಯುತ್ತಿದ್ದಾರೆ. ಎಲ್ಲಿ ಹೆಚ್ಚು ಕಸ ಎಸೆಯುತ್ತಿರುವ ಕುರಿತು ಸಾರ್ವಜನಿಕರ ದೂರು ಬರುತ್ತದೆಯೋ ಅಲ್ಲಿಯೂ ಕ್ಯಾಮರಾ ಅಳವಡಿಸಿ 'ಕಸ ಪಾತಕಿ'ಗಳನ್ನು ಹಿಡಿಯಲಾಗುತ್ತಿದೆ. ಕಸ ಎಸೆಯುವವರನ್ನು ಪತ್ತೆ ಮಾಡಿ ಅವರಿಗೆ ಭಾರಿ ಪ್ರಮಾಣದಲ್ಲಿ ನಗರಸಭೆ ದಂಡವನ್ನೂ ವಿಧಿಸುತ್ತಿದೆ. ಕನಿಷ್ಠ 2 ಸಾವಿರ ರೂ., ಗರಿಷ್ಠ 5 ಸಾವಿರ ರೂ. ವರೆಗೂ ದಂಡ ಹಾಕಲಾಗುತ್ತಿದೆ. ತಿಳಿ ಹೇಳಿದರೂ ಪದೇಪದೆ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಇತ್ತೀಚೆಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. 2025ರ ಜುಲೈ ತಿಂಗಳಿಂದ 2026ರ ಜೂನ್ 15ರ ವರೆಗೆ ಕಸ ಎಸೆದವರಿಗೆ ವಿಧಿಸಿದ ದಂಡದ ಮೊತ್ತ ಒಟ್ಟು 4,76,600 ರೂ. ಸಂಗ್ರಹ ಆಗಿದೆ.