ವ್ಯಸನಮುಕ್ತ ಸಮಾಜ ನಿರ್ಮಾಣ ಸಂಕಲ್ಪ

 ಮುಳಿಂಜ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಉದ್ಘಾಟಿಸಿ ಮಂಜೇಶ್ವರ ಬಿಆರ್‌ಸಿ ಸಂಯೋಜಕ ರಾಜಗೋಪಾಲ ಮಾತನಾಡಿದರು. ಇಂತಿಯಾಸ್, ವಿಜಯನ್, ಧನ್ಯಾ, ಜಸೀಲಾ ಇತರರು ಇದ್ದರು.
ಮುಳಿಂಜ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಉದ್ಘಾಟಿಸಿ ಮಂಜೇಶ್ವರ ಬಿಆರ್‌ಸಿ ಸಂಯೋಜಕ ರಾಜಗೋಪಾಲ ಮಾತನಾಡಿದರು. ಇಂತಿಯಾಸ್, ವಿಜಯನ್, ಧನ್ಯಾ, ಜಸೀಲಾ ಇತರರು ಇದ್ದರು.
Published on
ಉಪ್ಪಳ: ಆರೋಗ್ಯಕರ ಮತ್ತು ಸದೃಢ ಸಮಾಜ ನಿರ್ಮಿಸಲು ಮಾದಕ ವಸ್ತುಗಳ ಬೇರುಗಳನ್ನು ಕಿತ್ತೊಗೆಯುವುದು ಅಗತ್ಯ. ಮಾದಕ ವಸ್ತುಗಳಿಗೆ ಮುಕ್ತಾಯ, ಆರೋಗ್ಯಕರ ಸಮಾಜಕ್ಕೆ ಆರಂಭ ಎಂಬುದು ಪ್ರತಿಯೊಬ್ಬರ ಧ್ಯೇಯ ಆಗಬೇಕು ಎಂದು ಮಂಜೇಶ್ವರ ಬಿಆರ್‌ಸಿ ಸಂಯೋಜಕ ರಾಜಗೋಪಾಲ ಹೇಳಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಡ್ರಗ್ಸ್‌ಮುಕ್ತ ಸಮಾಜ ನಿರ್ಮಿಸುವ ಅಂತಾರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಮುಳಿಂಜ ಜಿ.ಎಲ್.ಪಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಶಾಲಾ ಪಿಟಿಎ ಉಪಾಧ್ಯಕ್ಷ ಇಂತಿಯಾಸ್ ಅಧ್ಯಕ್ಷತೆ ವಹಿಸಿದ್ದರು. ‘ಮುಳಿಂಜ ವಾಣಿ’ ತರಗತಿ ಮಾಸಪತ್ರಿಕೆಯನ್ನು ಮಂಜೇಶ್ವರ ಸೀನಿಯರ್ ಸಿವಿಲ್ ಪೊಲೀಸ್ ಮಧು ಕಡಕಾವತ್ ಬಿಡುಗಡೆಗೊಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಪೋಸ್ಟರ್ ರಚನೆ, ಚಿತ್ರ ರಚನೆ, ಕ್ವಿಜ್ ಸ್ಪರ್ಧೆ ನಡೆಸಲಾಯಿತು.
ಮಂಜೇಶ್ವರ ಠಾಣೆಯ ಸಜೇಶ್, ವಿಜಯನ್, ಶಿಕ್ಷಕಿಯರಾದ ಧನ್ಯಾ, ಜಸೀಲಾ ಇದ್ದರು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿದರು. ರೇಷ್ಮಾ ವಂದಿಸಿದರು. ಆಯಿಷತ್ ಸೈನಾಝ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net