ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ನ ಗ್ರಾಹಕರು ಅನಗತ್ಯ ಪ್ಯಾನಿಕ್ ಬುಕಿಂಗ್ ಮಾಡುತ್ತಿದ್ದಾರೆ. ಅದರಿಂದಾಗಿ ಬುಕಿಂಗ್ ಆಗಿದ್ದರೂ ಸಹ ಅವರ ಮನೆಗಳಿಗೆ ಪೂರೈಸಲು 8-9 ದಿನ ವಿಳಂಬವಾಗುತ್ತಿದೆ. ಎಲ್ಲ ಗ್ರಾಹಕರಿಗೂ ವಾಟ್ಸಾಪ್, ರೋಬೋ ಕಾಲರ್ ಹಾಗೂ ದಿನಪತ್ರಿಕೆಗಳ ಮೂಲಕ 'ಒಟಿಪಿ ಕಡ್ಡಾಯ' ಎಂದು ಸಂದೇಶ ಕಳಿಸಿದ್ದರೂ ಸಹ ಮನೆಗೆ ಸಿಲಿಂಡರ್ ಪೂರೈಸಲು ಬಂದಾಗ ಒಟಿಪಿಗಾಗಿ ಎಚ್ಚೆತ್ತು, ತಡಕಾಡಿ ಮತ್ತಷ್ಟು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಒಟಿಪಿ ನೀಡದಿದ್ದರೆ ಗ್ಯಾಸ್ ಪೂರೈಕೆ ಮಾಡಲು ಆಗದು. ಬುಕಿಂಗ್ ಮಾಡಿಯೂ ಒಟಿಪಿ ಬರದಿದ್ದಲ್ಲಿ ಗ್ಯಾಸ್ ಪಾಸ್ಬುಕ್ನೊಂದಿಗೆ ಶಾಖೆಗೆ ಬಂದು ರಿಜಿಸ್ಟರ್ಡ್ ಫೋನ್ ನಂಬರ್ ಪರಿಶೀಲಸಿ, 'ರೀಸೆಂಡ್ ಒಟಿಪಿ' ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಎಂದು ಎಚ್ಪಿ ಗ್ಯಾಸ್ನ ಪಾಲುದಾರ ಬಾಲಾಜಿ ರಾಘವೇಂದ್ರ ಆಚಾರ್ಯ ಗ್ಯಾಸ್ನ ಮಾಲೀಕ ವಿಷ್ಣು ಆಚಾರ್ಯ ತಿಳಿಸಿದ್ದಾರೆ.