ಉಡುಪಿಯ ಡಾ. ಜಿ.ಶಂಕರ್ ಕಾಲೇಜ್ನಲ್ಲಿ "ವಾಣಿಜ್ಯ ಮತ್ತು ನಿರ್ವಹಣಾ ಸಂಘ'ವನ್ನು ಸಚಿನ್ ಆರ್. ಚಂದ್ರ ಉದ್ಘಾಟಿಸಿದರು. ಪ್ರೊ. ನಿಕೇತನಾ, ಪ್ರೊ. ಕೃಷ್ಣ ಭಟ್, ಪ್ರೊ. ಶ್ರೀಮತಿ ಅಡಿಗ, ಡಾ. ರವೀಶ್ ಬಿ. ಇತರರಿದ್ದರು.
Published on:
Copied
Follow Us
* ಪ್ರಾಧ್ಯಾಪಕ ಸಚಿನ್ ಆರ್. ಚಂದ್ರ ಅನಿಸಿಕೆ
* ವಾಣಿಜ್ಯ-ನಿರ್ವಹಣಾ ಸಂಘ ಉದ್ಘಾಟನೆ
ಉಡುಪಿ: ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರದಲ್ಲಿಯೂ ಅಪಾರ ಬದಲಾವಣೆ ಆಗುತ್ತಿದೆ. ಇಲ್ಲಿಯೂ ಉತ್ತಮ ಅವಕಾಶ ಪಡೆಯಲು ವಿದ್ಯಾರ್ಥಿಗಳು ವೃತ್ತಿಪರ ಕೌಶಲದೊಂದಿಗೆ ನಾಯಕತ್ವ ಮತ್ತು ಉದ್ಯಮಶೀಲತಾ ಗುಣ ಬೆಳೆಸಿಕೊಳ್ಳಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಚಿನ್ ಆರ್. ಚಂದ್ರ ಸಲಹೆ ನೀಡಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 'ವಾಣಿಜ್ಯ ಮತ್ತು ನಿರ್ವಹಣಾ ಸಂಘ' ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲೆ ಪ್ರೊ. ನಿಕೇತನಾ ಮಾತನಾಡಿ, ಈ ಸಂಘದಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜ್ಞಾನ, ನಾಯಕತ್ವ ಗುಣ, ಸಂವಹನ ಕೌಶಲ, ತಂಡದ ಮನೋಭಾವ ವೃದ್ಧಿಸಲಿದೆ. ಅಲ್ಲದೆ, ಉದ್ಯಮಶೀಲ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ವಿವಿಧ ಶೈಕ್ಷಣಿಕ ಮತ್ತು ಸಹಪಠ್ಯ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್, ಐಕ್ಯೂಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.
ಭವ್ಯಶ್ರೀ ಪ್ರಾರ್ಥಿಸಿದರು. ಸಂಘದ ಸಂಯೋಜಕ ಡಾ. ರವೀಶ್ ಬಿ. ಸ್ವಾಗತಿಸಿದರು. ಸಂಚಿತಾ ವಂದಿಸಿದರು. ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು.