ಉಡುಪಿಯಲ್ಲಿ ಆಯೋಜಿಸಿದ್ದ ಕೃಷ್ಣಮೂರ್ತಿ ರಾವ್ ಕೊಡವೂರು, ಗುರುರಾಜ್ ಐತಾಳ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ನಾರಾಯಣ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ. ನಾರಾಯಣ ಬಲ್ಲಾಳ್, ಪ್ರೊ. ಎಂ.ಎಲ್. ಸಾಮಗ, ಯತೀಶ್ ಬೈಕಂಪಾಡಿ, ಲಕ್ಷ್ಮೀ ಗುರುರಾಜ್ ಇದ್ದರು.
Published on:
Copied
Follow Us
* ಕೆ. ನಾರಾಯಣ ಬಲ್ಲಾಳ್ ಅನಿಸಿಕೆ
* ಸಂಸ್ಮರಣಾ ಪ್ರಶಸ್ತಿ ಪ್ರದಾನ
B ಬರುವಾಗ ಕತ್ತಲೆ, ಹೋಗುವಾಗ ಕತ್ತಲೆ. ಈ ಎರಡು ಸ್ಥಿತಿಯ ಮಧ್ಯೆ ಬೆಳಕಾಗಬೇಕು, ಬೆಳಕು ಪಸರಿಸಬೇಕು ಎಂಬ ಸ್ವಾಮಿ ವಿವೇಕಾನಂದ ಅವರ ಮಾತಿಗೆ ಕೊಡವೂರಿನ ಕೃಷ್ಣಮೂರ್ತಿ ರಾವ್ ಪೂರಕವಾಗಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದರೂ ಸಂಗೀತ, ಕಲಾ ಕ್ಷೇತ್ರವನ್ನು ಬೆಳಗಿದ್ದರು. ಅವರ ಅಳಿಯನಾಗಿದ್ದ ಗುರುರಾಜ್ ಐತಾಳ್ ಕಲಾ ಪೋಷಕರಾಗಿ ಕಲೆಯನ್ನು ಪಸರಿಸಿದವರು ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ. ನಾರಾಯಣ ಬಲ್ಲಾಳ್ ತಿಳಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಲಕ್ಷ್ಮೀ ಗುರುರಾಜ್ ಎನ್ಎನ್ಯು (ರಿ.) ವತಿಯಿಂದ ಶನಿವಾರ (ಮೇ 23) ಆಯೋಜಿಸಿದ್ದ ದಿ. ಕೃಷ್ಣಮೂರ್ತಿ ರಾವ್ ಕೊಡವೂರು ಮತ್ತು ಪೋಷಕರಾದ ದಿ. ಗುರುರಾಜ್ ಐತಾಳ್ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೆ. ನಾರಾಯಣ ಬಲ್ಲಾಳ್ ಉದ್ಘಾಟಿಸಿದರು.
ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಶಾಖೆಯ ಆಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ
ನಾಟಿವೈದ್ಯರೂ ಆದ ಪ್ರಸಿದ್ಧ ನಾಟ್ಯಾಚಾರ್ಯ ನಾರಾಯಣ ಭಟ್ ಉಡುಪಿ ಅವರಿಗೆ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೇಧಿನಿ ಭಟ್ ಪ್ರಾರ್ಥಿಸಿದರು. ಸಂಸ್ಥೆಯ ಟ್ರಸ್ಟಿ ಚಂದ್ರಶೇಖರ್ ರಾವ್ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕಿ ಲಕ್ಷ್ಮೀ ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ತಂತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಲಕ್ಷ್ಮೀ ಗುರುರಾಜ್ ನೃತ್ಯನಿಕೇತನ ಉಡುಪಿ ಕಲಾವಿದರಿಂದ 'ನೃತ್ಯ ನೀರಾಜನಂ' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.