

ಗೀತೆಯಲ್ಲಿ ಶ್ರೀಕೃಷ್ಣ ಕೊಟ್ಟ ಸಂದೇಶದಂತೆ ಸುಸಂಸ್ಕೃತರಾಗಿ, ಜ್ಞಾನ ಸಂಪಾದನೆ ಮಾಡಿ ಶಾಸ್ತ್ರವನ್ನಿಟ್ಟುಕೊಂಡು ಸಮಾಜ ತಿದ್ದುವ ಕೆಲಸ ಮಾಡುವವರು, ಜ್ಞಾನಿಗಳನ್ನು ತಯಾರು ಮಾಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ವಿಭುದೇಶ ತೀರ್ಥರು ಅದಮಾರಿನ ಈ ಹಳ್ಳಿಯಲ್ಲಿ ಸಂಸ್ಥೆ ಆರಂಭ ಮಾಡಿದ್ದರು. ಅಂತಹ ಶಿಕ್ಷಿತ, ಸುಸಂಸ್ಕೃತ ಮಕ್ಕಳನ್ನು ತಯಾರು ಮಾಡುವಲ್ಲಿ 75 ವರ್ಷ ಸಾರ್ಥಕ ಬದುಕನ್ನು ಕಂಡಿರುವ ಈ ಸಂಸ್ಥೆ ನೂರಾರು ಕಾಲ ಚೆನ್ನಾಗಿ ಬಾಳಲಿ.
ವ್ಯಕ್ತಿ ನಿರ್ವಾಣ ಸರಿಯಾಗಿ ಮಾಡಿದರೆ ಅವರು ರಾಷ್ಟ್ರ ನಿರ್ವಾಣಕ್ಕೆ ಒಲಿಯುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿ ಸಕಲವೂ ಇದ್ದರೂ ಸರಿಯಾದ ರಕ್ಷಣಾ ವ್ಯವಸ್ಥೆ ಇರದೆ ನಮ್ಮ ಮೇಲೆ ಆಕ್ರಮಣಗಳಾದವು. ವಿಕಸಿತ ಭಾರತ ಸಾಧ್ಯವಾಗಲು ಪೂರ್ಣಪ್ರಜ್ಞದಂಥ ವಿದ್ಯಾಸಂಸ್ಥೆಗಳು ಶ್ರಮಿಸುತ್ತಿವೆ. ವಿಜ್ಞಾನಿಗಳಾಗಿ ಈ ವರ್ಷದೊಳಗಾಗಿ ಭಾರತದ ಶಕ್ತಿ ಬಗ್ಗೆ ೋಷಣೆ ಮಾಡಲಿದ್ದೇವೆ.