ಪದವಿ ನೀಡುವ ಕೇಂದ್ರಗಳಾಗದಿರಲಿ ಕಾಲೇಜುಗಳು

ಹ್ಯಾಕಥಾನ್ ಸಮಾರೋಪ ಸಮಾರಂಭವನ್ನು ಯೆನೆಪೋಯ ವಿವಿ ಉಪಕುಲಪತಿ ಡಾ.ಎಂ.ವಿಜಯಕುಮಾರ್ ಉದ್ಘಾಟಿಸಿದರು. ಯೆನೆಪೊಯ ವಿವಿ ಉಪಕುಲಪತಿ ಡಾ.ಬಿ. ಎಚ್.ಶ್ರೀಪತಿ ರಾವ್, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಇನ್ನಿತರರು ಉಪಸ್ಥಿತರಿದ್ದರು.
ಹ್ಯಾಕಥಾನ್ ಸಮಾರೋಪ ಸಮಾರಂಭವನ್ನು ಯೆನೆಪೋಯ ವಿವಿ ಉಪಕುಲಪತಿ ಡಾ.ಎಂ.ವಿಜಯಕುಮಾರ್ ಉದ್ಘಾಟಿಸಿದರು. ಯೆನೆಪೊಯ ವಿವಿ ಉಪಕುಲಪತಿ ಡಾ.ಬಿ. ಎಚ್.ಶ್ರೀಪತಿ ರಾವ್, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಇನ್ನಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕಾಲೇಜುಗಳು ಕೇವಲ ಪದವಿ ನೀಡುವ ಕೇಂದ್ರಗಳಾಗಿರದೆ ಶಿಕ್ಷಣದ ನೈಜ ಉದ್ದೇಶ ಮತ್ತು ಆಶಯವನ್ನು ಅರಿತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗಣೇರಿ ಹೇಳಿದರು.
ಭಾರತ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಆಶ್ರಯದಲ್ಲಿ ಆಯೋಜಿಸಲಾದ ’ಪ್ರಾಜೆಕ್ಟ್ ಸಂಕಲ್ಪ್ ಕೋಡ್ 4 ಚೇಂಜ್’ 24 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್‌ಗೆ ಸೋಮವಾರ ದೇರಳಕಟ್ಟೆಯ ಯೆನೆಪೋಯ ವಿವಿಯಲ್ಲಿ ಚಾಲನೆ ನೀಡಿ ಮಾತನಾಡಿದರು.
ಯೆನೆಪೋಯ ಪರಿಗಣಿಸಲ್ಪಟ್ಟ ವಿ.ವಿ.ಯ ಸಹ ಕುಲಪತಿ ಡಾ.ಎಂ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆ ಕೇವಲ ಪ್ರಕಟಣೆಗೆ ಸೀಮಿತವಾಗದೆ ಅದರ ಫಲಿತಾಂಶಗಳು ಸಮಾಜಕ್ಕೆ ಉಪಯುಕ್ತವಾಗುವ ಉತ್ಪನ್ನಗಳು ಮತ್ತು ಪರಿಹಾರಗಳಾಗಿ ರೂಪುಗೊಳ್ಳಬೇಕು ಎಂದರು.
ಬೆಂಗಳೂರು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಗಿರಿಧರ್ ಉಪಧ್ಯಾಯ, ಬಿಸಿನೆಸ್ ಡೆವಲಪ್‌ಮೆಂಟ್ ಗ್ರೂಪ್ ಆಫ್ ಫಾರ್ಮಾಸ್ಯುಟಿಕಲ್ಸ್‌ನ ಉಪಾಧ್ಯಕ್ಷ ಡಾ.ಸುನೀಲ್ ಎಸ್.ಚಿಪ್ಲೂಣ್‌ಕರ್, ಯೆನೆಪೋಯ ವಿವಿ ಕುಲಸಚಿವ ಡಾ.ಅಶ್ವಿನಿ ದತ್ ಆರ್., ಸುರತ್ಕಲ್ ಎನ್‌ಐಟಿಕೆ ಸಂಶೋಧನಾ ಮತ್ತು ಆವಿಷ್ಕಾರ ವಿಭಾಗ ಡೀನ್ ಪ್ರೊ.ಉದಯ ಭಟ್, ಯೆನೆಪೋಯ ಇನ್‌ಕ್ಯುಬೆಟರ್ ಟೆಕ್ನಾಲಜಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಸಿಮ್ ಸಯ್ಯದ್ ಶೀರಝ್ ಉಪಸ್ಥಿತರಿದ್ದರು.
ಯೆನೆಪೋಯ ವಿವಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ನಿರ್ದೇಶಕಿ ಡಾ.ರೇಖಾ ಪಿ.ಡಿ.ಸ್ವಾಗತಿಸಿದರು. ಯೆನೆಪೋಯ ವಿಸ್ತರಣಾ ಮತ್ತು ಜನಸಂಪರ್ಕ ನಿರ್ದೇಶಕಿ ಡಾ.ಅಶ್ವಿನಿ ಎಸ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಪ್ರಿಯಾ ವಂದಿಸಿದರು.
ಆಯ್ಕೆಯಾಗುವ ಅತ್ಯುತ್ತಮ 10 ತಂಡಗಳಿಗೆ ಯೆನೆಪೋಯ ಇನೋವೇಶನ್ ಸೆಂಟರ್ ವತಿಯಿಂದ ಮಾರ್ಗದರ್ಶನ ಹಾಗೂ ಬೆಂಬಲ ಒದಗಿಸಲಾಗುತ್ತದೆ. ಆಯ್ಕೆಯಾದ ಪ್ರೊಜೆಕ್ಟ್‌ಗಳನ್ನು ಮುಂದಿನ ಹಂತದಲ್ಲಿ ಅಭಿವೃದ್ಧಿಪಡಿಸಿ, ಅನುಷ್ಠಾನ ಮತ್ತು ವಿಸ್ತರಣೆಗೆ ಅಗತ್ಯವಾದ ಹಣಕಾಸು ಹಾಗೂ ತಾಂತ್ರಿಕ ನೆರವು ನೀಡಲಾಗುತ್ತದೆ. ಡಾ.ಅಶ್ವಿನಿ ಎಸ್.ಶೆಟ್ಟಿ, ನಿರ್ದೇಶಕಿ, ಯೆನೆಪೋಯ ವಿಸ್ತರಣಾ ಮತ್ತು ಜನಸಂಪರ್ಕ ಘಟಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net