ಓವರ್‌ಟೇಕ್ ಭರಾಟೆಗೆ ಬೈಕ್ ಸವಾರ ಬಲಿ

 ನಾಟೆಕಲ್ ತಿರುವಿನಲ್ಲಿ ಮಗುಚಿಬಿದ್ದ ಕಾಲೇಜು ಬಸ್.
ನಾಟೆಕಲ್ ತಿರುವಿನಲ್ಲಿ ಮಗುಚಿಬಿದ್ದ ಕಾಲೇಜು ಬಸ್.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೊಣಾಜೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಮುಡಿಪು ನಡುಪದವು ಪಿ.ಎ.ಕಾಲೇಜ್ ಆ್ ಇಂಜಿನಿಯರಿಂಗ್ ಬಸ್, ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ನಾಟೆಕಲ್ ತಿರುವಿನಲ್ಲಿ ಮಗುಚಿಬಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಶನಿವಾರ ಸಂಜೆ ಕಾಲೇಜು ಬಿಟ್ಟ ಬಳಿಕ ಎಂದಿನಂತೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್, ನಾಟೆಕಲ್ ತಿರುವಿನ ಬಳಿ ತಲುಪಿದಾಗ ಮುಂದಿನಿಂದ ಹೋಗುತ್ತಿದ್ದ ದ್ವಿಚಕ್ರ ವಾಹನವನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಚರಂಡಿಗೆ ವಾಲಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸವಾರ ಮತ್ತು ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಘಟನೆ ನಡೆದ ಸಂದರ್ಭ ದ್ವಿಚಕ್ರ ವಾಹನ ಸವಾರನ ಸಹಿತ ಬಸ್‌ನಡಿ ಸಿಲುಕಿಕೊಂಡಿದ್ದರು. ಆದರೆ ಬಸ್ಸಿನಲ್ಲಿದ್ದ ಯಾರ ಗಮನಕ್ಕೂ ಬಂದಿರಲಿಲ್ಲ. ಸಾರ್ವಜನಿಕರು ಬಸ್ಸಿನ ಗಾಜುಗಳನ್ನು ಪುಡಿಗೈದು ವಿದ್ಯಾರ್ಥಿಗಳನ್ನು ಹೊರತೆಗೆದ ಬಳಿಕ ಅಡಿಭಾಗದಲ್ಲಿ ದ್ವಿಚಕ್ರ ವಾಹನ ಸವಾರ ಸಿಲುಕಿದ್ದನ್ನು ನೋಡಿ ಬಳಿಕ ಕ್ರೇನ್ ತರಿಸಿ ಬಸ್ಸನ್ನು ಮೇಲಕ್ಕೆತ್ತಿ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರಿಂದ ಕೆಲಹೊತ್ತು ರಸ್ತೆ ಬಂದ್ ಆಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಗೆ ಚಾಲಕನ ನಿರ್ಲಕ್ಷ್ಯ ಮತ್ತು ಮಿತಿಮೀರಿದ ವೇಗ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net