ಬಳಕೆದಾರರ ವೇದಿಕೆ ಅಧ್ಯಕ್ಷ ರಾಮ್ ಭಟ್ ಮಾತನಾಡಿ, ನಗರದಲ್ಲಿ ಅನೇಕ ಶ್ರೀಮಂತರು 15 ವರ್ಷಗಳಿಂದ ತೆರಿಕೆ ಕಟ್ಟುತ್ತಿಲ್ಲ. ಅವರ ವಿರುದ್ಧ ನಗರಸಭೆ ಯಾವುದೇ ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ಕೇಳಿದರೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮಹಂತೇಶ್ ಹಂಗರಗಿ, ತೆರಿಗೆ ಕಟ್ಟದೇ ಇರುವವರ ಮಾಹಿತಿ ಸಂಗ್ರಹಿಸಲಾಗಿದ್ದು, ಪ್ರತಿಯೊಬ್ಬರಿಗೂ ನೋಟಿಸ್ ನೀಡಲಾಗಿದೆ. ಕೆಲವೆಡೆ ಕಟ್ಟಡದ ಅಳತೆ ಕಡಿಮೆ ತೋರಿಸಿ ತೆರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಬಿಲ್ ಕಲೆಕ್ಟರ್ಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಅಳತೆ ಮಾಡಿದ್ದಾರೆ. 6 ವರ್ಷದ ದಂಡಮೊತ್ತವನ್ನು ಒಟ್ಟಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದರು. ಲೆಕ್ಕಾಧಿಕ್ಷಕ ಚಂದ್ರರಾಮ ದೇವಾಡಿಗ ಉಪಸ್ಥಿತರಿದ್ದರು.