ಸುಗುಣೇಂದ್ರ ಶ್ರೀಗಳ ಚತುರ್ಥ ಪರ್ಯಾಯ ಇದಾಗಿದ್ದು, 'ವಿಶ್ವ ಗೀತಾ' ಪರ್ಯಾಯ ಎಂಬ ಉದ್ಗೋಷದೊಂದಿಗೆ ಆಚರಿಸುತ್ತಿದ್ದಾರೆ. ಎರಡು ವರ್ಷದಿಂದ ನಿರಂತರವಾಗಿ ಭಗವದ್ಗೀತಾ ಪ್ರಸಾರ, ಪ್ರಚಾರಕ್ಕಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಜನರಿಂದ ಗೀತೆ ಬರೆಸಲಾಗುತ್ತಿದೆ. ನಿತ್ಯವೂ ನಾಡಿನ ವಿವಿಧ ಮಠಾಧೀಶರನ್ನು ಆಹ್ವಾನಿಸಿ 'ಸಂತ ಸಂದೇಶ'ದ ಮೂಲಕ ಜನರಿಗೆ ಆಧ್ಯಾತ್ಮಿಕ ವಿಚಾರ ತಲುಪಿಸಲಾಗುತ್ತಿದೆ ಎಂದು ಪ್ರಸನ್ನ ಆಚಾರ್ಯ ಮಾಹಿತಿ ನೀಡಿದರು.