ಶಿಬಿರಗಳಿಂದ ಸಂಸ್ಕೃತಿ, ಪರಂಪರೆಯ ಜ್ಞಾನ ಲಭ್ಯ

ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಬೇಸಿಗೆ ಶಿಬಿರದ ಸಮಾರೋಪ ನಡೆಯಿತು. ಡಾ. ಪಿ. ಗಿರಿಧರ್​ ಕಿಣಿ, ಪಳ್ಳಿ ಕಿಶನ್​ ಹೆಗ್ಡೆ, ಪ್ರೊ. ಎಸ್​.ವಿ. ಉದಯಕುಮಾರ್​ ಶೆಟ್ಟಿ, ಮಂಜುನಾಥ್​ ಮಯ್ಯ, ಮೀನಾಲಕ್ಷಿಣಿ ಅಡ್ಯಂತಾಯ, ಡಾ. ಬಿ. ಜಗದೀಶ್​ ಶೆಟ್ಟಿ ಹಾಗೂ ಶಿಬಿರಾರ್ಥಿಗಳಿದ್ದರು.
ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಬೇಸಿಗೆ ಶಿಬಿರದ ಸಮಾರೋಪ ನಡೆಯಿತು. ಡಾ. ಪಿ. ಗಿರಿಧರ್​ ಕಿಣಿ, ಪಳ್ಳಿ ಕಿಶನ್​ ಹೆಗ್ಡೆ, ಪ್ರೊ. ಎಸ್​.ವಿ. ಉದಯಕುಮಾರ್​ ಶೆಟ್ಟಿ, ಮಂಜುನಾಥ್​ ಮಯ್ಯ, ಮೀನಾಲಕ್ಷಿಣಿ ಅಡ್ಯಂತಾಯ, ಡಾ. ಬಿ. ಜಗದೀಶ್​ ಶೆಟ್ಟಿ ಹಾಗೂ ಶಿಬಿರಾರ್ಥಿಗಳಿದ್ದರು.
Published on

* ಮಾಹೆ ಕುಲಸಚಿವ ಡಾ. ಪಿ. ಗಿರಿಧರ್​ ಕಿಣಿ ಅಭಿಪ್ರಾಯ

* ಹತ್ತು ದಿನದ ಯಕ್ಷಗಾನ ತರಬೇತಿ ಸಮಾರೋಪ

ಉಡುಪಿ: ವಿದ್ಯಾರ್ಥಿಗಳು ತಮ್ಮ ರಜಾ ಅವಧಿಯಲ್ಲಿ ವಿವಿಧ ಕಲೆ, ಕೌಶಲ ಅರಿತುಕೊಳ್ಳಲು ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು. ಅದರಿಂದ ಶಾಲಾ ಕಲಿಕೆಯೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಅಲ್ಲದೆ, ರಜಾ ಸಮಯದ ಸದುಪಯೋಗ ಆಗುತ್ತದೆ ಎಂದು ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್​ ಕಿಣಿ ತಿಳಿಸಿದರು.
ಉಡುಪಿಯ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆ, ವೇಷಭೂಷಣ ಮತ್ತು ಬಣ್ಣಗಾರಿಕೆ ಒಳಗೊಂಡ 10 ದಿನದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್​ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾದ ಪ್ರೊ. ಎಸ್​.ವಿ. ಉದಯಕುಮಾರ್​ ಶೆಟ್ಟಿ, ಮಂಜುನಾಥ್​ ಮಯ್ಯ, ಮೀನಾಲಕ್ಷಿಣಿ ಅಡ್ಯಂತಾಯ, ಕೇಂದ್ರದ ಗುರುಗಳು ಉಪಸ್ಥಿತರಿದ್ದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸಿದರು. 
ಶಿಬಿರಾರ್ಥಿಗಳು ಹಾಗೂ ಪಾಲಕರು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿ ಯಕ್ಷಗಾನ ಕಲಿತ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net