ಹೆಣ್ಣೆಂದರೆ ಮಮತೆಯ ರೂಪ, ಕರುಣೆಯ ಪ್ರತೀಕ

ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್​ನಲ್ಲಿ ಸ್ತ್ರೀ ಸಂಘಟನೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಫಾದರ್​ ಡೆನಿಸ್​ ಡೆಸಾ ಉದ್ಘಾಟಿಸಿದರು. ರೆಜಿನಾಲ್ಡ್​ ಪಿಂಟೊ, ಲೆಸ್ಲಿ ಆರೋಝಾ, ಸಿಲ್ವಿಯಾ ಸುವಾರಿಸ್​, ಪ್ರಿಯಾ ಫುರ್ಟಾಡೊ, ಜೋಕಿಂ ಡಿಸೋಜಾ ಇತರರಿದ್ದರು.
ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ಚರ್ಚ್​ನಲ್ಲಿ ಸ್ತ್ರೀ ಸಂಘಟನೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಫಾದರ್​ ಡೆನಿಸ್​ ಡೆಸಾ ಉದ್ಘಾಟಿಸಿದರು. ರೆಜಿನಾಲ್ಡ್​ ಪಿಂಟೊ, ಲೆಸ್ಲಿ ಆರೋಝಾ, ಸಿಲ್ವಿಯಾ ಸುವಾರಿಸ್​, ಪ್ರಿಯಾ ಫುರ್ಟಾಡೊ, ಜೋಕಿಂ ಡಿಸೋಜಾ ಇತರರಿದ್ದರು.
Published on

* ತೊಟ್ಟಂ ಚರ್ಚ್​ನ ಫಾದರ್​ ಡೆನಿಸ್​ ಡೆಸಾ ಅಭಿಪ್ರಾಯ

* ಸ್ತ್ರೀ ಸಂಘಟನೆಯ ರಜತ ಮಹೋತ್ಸವದ ಸಮಾರೋಪ

ಉಡುಪಿ: ಮಹಿಳೆ ಸಹಜವಾಗಿಯೇ ಪ್ರೀತಿ, ದಯೆ, ಸಹಾನುಭೂತಿ ಮತ್ತು ತ್ಯಾಗ ಗುಣ ಹೊಂದಿದವಳು. ತಾಯಿ, ಸಹೋದರಿ, ಪತ್ನಿ ಮುಂತಾದ ವಿವಿಧ ಪಾತ್ರಗಳಲ್ಲಿ ಕುಟುಂಬ ಹಾಗೂ ಸಮಾಜ ಬೆಳೆಸುವ ಪ್ರಮುಖ ಶಕ್ತಿಯಾಗಿದ್ದಾಳೆ. ಹೆಣ್ಣೆಂದರೆ ಮಮತೆಯ ರೂಪ, ಕರುಣೆಯ ಪ್ರತೀಕ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್​ನ ಧರ್ಮಗುರು ವಂ.ಡೆನಿಸ್​ ಡೆಸಾ ಅಭಿಪ್ರಾಯ ಪಟ್ಟರು.
ಉಡುಪಿ ಮಲ್ಪೆಯ ಚರ್ಚ್​ನಲ್ಲಿ ಭಾನುವಾರ (ಏ.12) ಸಂಜೆ ನಡೆದ ಸ್ತ್ರೀ ಸಂಘಟನೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆಯ ವಹಿಸಿ ಮಾತನಾಡಿದರು.

ಮಹಿಳಾ ಸಬಲೀಕರಣಕ್ಕೆ ಆದ್ಯತೆ

ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ರೆಜಿನಾಲ್ಡ್​ ಪಿಂಟೊ ಮಾತನಾಡಿ, ಮಹಿಳೆಯರಲ್ಲಿ ಜವಾಬ್ದಾರಿಯುತ ನಾಯಕತ್ವ ಬೆಳೆಸುವಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಿದೆ. ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಚರ್ಚ್​ ಪಾಲನಾ ಸಮಿತಿಯ ಉಪಾಧ್ಯಕ್ಷ ಲೆಸ್ಲಿ ಆರೋಝಾ, ಉಡುಪಿ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಸಿಲ್ವಿಯಾ ಸುವಾರಿಸ್​, ಕಲ್ಯಾಣಪುರ ವಲಯಾಧ್ಯಕ್ಷೆ ಪ್ರಿಯಾ ಫುರ್ಟಾಡೊ ಮಾತನಾಡಿ ಶುಭ ಹಾರೈಸಿದರು.

ಸನ್ಮಾನ-ಬಹುಮಾನ

ಸಂಘಟನೆಯ ಸ್ಥಾಪಕಾಧ್ಯಕ್ಷೆ ಲೀನಾ ರೋಚ್​, ಕಲ್ಯಾಣಪುರ ವಲಯ ಸಚೇತಕಿ ಪ್ರೇಮಾ ಬಾರೆಟ್ಟೊ, ಕಳೆದ 25 ವರ್ಷದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ರಜತ ಮಹೋತ್ಸವ ವರ್ಷದ ಅಧ್ಯಕ್ಷೆ, ಚರ್ಚ್​ನ ಆಧ್ಯಾತ್ಮಿಕ ನಿರ್ದೇಶಕ ವಂ.ಡೆನಿಸ್​ ಡೆಸಾ ಇವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಲಯ ಆಧ್ಯಾತ್ಮಿಕ ನಿರ್ದೇಶಕ ವಂ.ಜೋಕಿಂ ಡಿಸೋಜಾ, ಧರ್ಮಗುರುಗಳಾದ ವಂ.ಆಲ್ವಿನ್​, ವಂ.ಫ್ರೆಡ್ರಿಕ್​ ಡಿಸೋಜಾ, ವಂ.ಸ್ಟೀಫನ್​ ರೊಡ್ರಿಗಸ್​, ಸ್ಥಳೀಯ ಕಾನ್ವೆಂಟ್​ನ ಮುಖ್ಯಸ್ಥೆ ಸಿಸ್ಟರ್​ ಸುಶ್ಮಾ, ಚರ್ಚ್​ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್​ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷೆ ಪ್ರಿಯಾ ಫುರ್ಟಾಡೊ ಸ್ವಾಗತಿಸಿದರು. ಶಾಂತಿ ಫೆರ್ನಾಂಡಿಸ್​ ವಂದಿಸಿದರು. ಜೆನಿತಾ ಫೆರ್ನಾಂಡಿಸ್​ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪವಿತ್ರ ಬಲಿಪೂಜೆ ಅರ್ಪಿಸಲಾಯಿತು.
"

ಪ್ರತಿಯೊಂದು ಸಂಘಟನೆಗೆ 25 ವರ್ಷ ಎನ್ನುವುದು ಮೈಲಿಗಲ್ಲು. ಹಿಂದಿನ ಕೆಲಸಗಳನ್ನು ಮೆಲುಕು ಹಾಕುವುದರೊಂದಿಗೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಸಿಗುವ ಅವಕಾಶ ಇದಾಗಿದೆ. ಚರ್ಚ್​ನ ಸ್ತ್ರೀ ಸಂಘಟನೆಯು ಮಹಿಳಾ ಸಬಲೀಕರಣದತ್ತ ವಿಶೇಷ ಕಾಳಜಿ ವಹಿಸಿರುವುದು ಶ್ಲಾಘನೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net