ಬಡ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್​ ಆಸರೆ

ಉಡುಪಿಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ವತಿಯಿಂದ ಆಯೋಜಿಸಿದ್ದ ಸನಿವಾಸ ಶಿಬಿರದಲ್ಲಿ ಪ್ರವೀಣ್​ ಗುಡಿ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಸಖಾರಾಮ ಸೋಮಯಾಜಿ, ಯು. ವಿಶ್ವನಾಥ ಶೆಣೈ, ವಿಜಯಕುಮಾರ್​ ಮುದ್ರಾಡಿ, ವಿಲಾಸಿನಿ ಬಿ. ಶೆಣೈ, ತಾರಾದೇವಿ, ವಿಷ್ಣುಮೂರ್ತಿ ಪ್ರಭು, ಭುವನಪ್ರಸಾದ್​ ಹೆಗ್ಡೆ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​ ಇದ್ದರು.
ಉಡುಪಿಯಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ವತಿಯಿಂದ ಆಯೋಜಿಸಿದ್ದ ಸನಿವಾಸ ಶಿಬಿರದಲ್ಲಿ ಪ್ರವೀಣ್​ ಗುಡಿ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಸಖಾರಾಮ ಸೋಮಯಾಜಿ, ಯು. ವಿಶ್ವನಾಥ ಶೆಣೈ, ವಿಜಯಕುಮಾರ್​ ಮುದ್ರಾಡಿ, ವಿಲಾಸಿನಿ ಬಿ. ಶೆಣೈ, ತಾರಾದೇವಿ, ವಿಷ್ಣುಮೂರ್ತಿ ಪ್ರಭು, ಭುವನಪ್ರಸಾದ್​ ಹೆಗ್ಡೆ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​ ಇದ್ದರು.
Published on

* ಶಿಕ್ಷಣ ತಜ್ಞ ಪ್ರೊ. ಸಖಾರಾಮ ಸೋಮಯಾಜಿ ಮೆಚ್ಚುಗೆ

* ಮೂರು ದಿನಗಳ ಸನಿವಾಸ ಶೈಕ್ಷಣಿಕ ಶಿಬಿರ ಸಮಾರೋಪ

ಉಡುಪಿ: ಪದವಿ ಹಂತದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ವಿದ್ಯಾಪೋಷಕ್​ನ ಸನಿವಾಸ ಶಿಬಿರ ಬಹಳ ಉಪಯುಕ್ತ. ಯಕ್ಷಗಾನ ಕಲಾರಂಗವು ಬಡ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್​ ಯೋಜನೆಯಡಿ ಆರ್ಥಿಕ ಸಹಾಯ ಒದಗಿಸುವುದು, ಶಿಬಿರಗಳ ಮೂಲಕ ಮಾರ್ಗದರ್ಶನ ನೀಡಿ ಅವರು ಸಮಾಜದಲ್ಲಿ ಗೌರವದ ಸ್ಥಾನ ಪಡೆಯಲು ಕಾರಣೀಕರ್ತರಾಗಿದ್ದಾರೆ ಎಂದು ಹಿರಿಯ ಶಿಕ್ಷಣ ತಜ್ಞ ಪ್ರೊ. ಸಖಾರಾಮ ಸೋಮಯಾಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಐವೈಸಿ ಸಭಾಂಗಣದಲ್ಲಿ ಯಕ್ಷಗಾನ ಕಲಾರಂಗವು ಪದವಿ ಅಂತಿಮ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೂರು ದಿನಗಳ ಸನಿವಾಸ ಶಿಬಿರದಲ್ಲಿ ಗುರುವಾರ (ಜು.16) ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯು. ವಿಶ್ವನಾಥ ಶೆಣೈ, ವಿಜಯಕುಮಾರ್​ ಮುದ್ರಾಡಿ, ವಿಲಾಸಿನಿ ಬಿ. ಶೆಣೈ, ತಾರಾದೇವಿ, ವಿಷ್ಣುಮೂರ್ತಿ ಪ್ರಭು, ಭುವನಪ್ರಸಾದ್​ ಹೆಗ್ಡೆ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಮರ್ಣೆ ಉಮೇಶ್​ ಭಟ್​, ಅನಂತರಾಜ ಉಪಾಧ್ಯ, ಎನ್​. ರಾಮ ಭಟ್​, ಎ. ನಾಗಭೂಷಣ ಭಟ್​ ಪಾಲ್ಗೊಂಡಿದ್ದರು.
ಶಿಬಿರಾರ್ಥಿಗಳ ಪರವಾಗಿ ಧ್ರುವ ದೇವಾಡಿಗ, ನಾಗೇಂದ್ರ ಭಟ್​, ಮಿಸ್ಬಾ ಕೌಸರ್​, ನಿಶ್ಚ್ಚಿತ್​, ಅಭಿಜ್ಞಾ ಹೆಗ್ಡೆ, ಹನುಮವ್ವ ಇತರರು ತಮ್ಮ ಅನುಭವ ಹಂಚಿಕೊಂಡರು. ಅಗತ್ಯವಿರುವ 15 ವಿದ್ಯಾರ್ಥಿಗಳಿಗೆ ಪ್ರೇರಣಾ ಇನ್ಫೋಸಿಸ್​ ಕೊಡಮಾಡಿದ ಕೈಗಡಿಯಾರ ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಸ್ವಾಗತಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ವಿದ್ಯಾಪ್ರಸಾದ್​ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.
"

ಯಕ್ಷಗಾನ ಕಲಾರಂಗ ಸಂಸ್ಥೆಯು ಮನೆಯಿದ್ದ ಹಾಗೆ. ಸಂಸ್ಥೆಯ ಸದಸ್ಯರ ಪ್ರೀತಿ-ವಿಶ್ವಾಸ ಧನ್ಯತೆ ಮೂಡಿಸುತ್ತದೆ. ಇಂತಹ ಶಿಬಿರಗಳನ್ನು ಹೆಚ್ಚು ಆಯೋಜಿಸುತ್ತ ವಿದ್ಯಾರ್ಥಿಗಳಲ್ಲಿ ಕೌಶಲ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಗಳಿಸುವ ಶಕ್ತಿ ಬೆಳೆಸೋಣ.

— ಪ್ರವೀಣ್​ ಗುಡಿ. ಸನಿವಾಸ ಶಿಬಿರದ ನಿರ್ದೇಶಕ.
ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ 
ಮೂರು ದಿನದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ರೆಸ್ಯೂಮ್​ ಬರೆಯುವ, ಸಂದರ್ಶನ ಎದುರಿಸುವ ಕೌಶಲ, ಮಾನವೀಯ ಗುಣ ಬೆಳೆಸಿಕೊಳ್ಳುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವ ಕುರಿತು ಶಿಬಿರದ ನಿರ್ದೇಶಕರು ಸೇರಿದಂತೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ಉಪಯುಕ್ತ ಮಾರ್ಗದರ್ಶನ ನೀಡಿದರು. 82 ವಿದ್ಯಾರ್ಥಿಗಳು ಸನಿವಾಸ ಶಿಬಿರದ ಪ್ರಯೋಜನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net