ಉಡುಪಿಯ ತೆಂಕನಿಡಿಯೂರು ಕಾಲೇಜಿನಲ್ಲಿ ಆಯೋಜಿಸಿದ್ದ 'ಕಬ್ಬದುಳುಮೆ' ಸಮಾರೋಪ ಕಾರ್ಯಕ್ರಮದಲ್ಲಿ ಡಾ. ಪಿ.ಬಿ. ಪ್ರಸನ್ನ ಮಾತನಾಡಿದರು. ಪ್ರೊ. ನಿತ್ಯಾನಂದ್ ವಿ. ಗಾಂವಕರ್, ಡಾ. ಶ್ರೀಧರ್ ಭಟ್, ಡಾ. ವಿಷ್ಣುಮೂರ್ತಿ ಪ್ರಭು, ಸಂಧ್ಯಾರಾಣಿ, ಲತಾ ನಾಯಕ್, ಭವ್ಯಾ ರೈ, ಶಾಲಿನಿ ಯು.ಬಿ., ರತ್ನಮಾಲಾ ಇದ್ದರು.
Published on:
Copied
Follow Us
* ಕನ್ನಡ ಪ್ರಾಧ್ಯಾಪಕ ಡಾ. ಪಿ.ಬಿ. ಪ್ರಸನ್ನ ಅನಿಸಿಕೆ
* ತೆಂನಿಡಿಯೂರು ಕಾಲೇಜಿನಲ್ಲಿ 'ಕಬ್ಬದುಳುಮೆ' ಸಮಾರೋಪ
ಉಡುಪಿ: ಭಾಷಾ ಕಲಿಕೆಯ ಸಂದರ್ಭದಲ್ಲಿ ಶಿಕ್ಷಕ-ವಿದ್ಯಾರ್ಥಿಗಳಿಬ್ಬರಿಗೂ ಭಾಷೆಯ ಅರಿವು ಅಗತ್ಯ. ಅಧ್ಯಾಪಕರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಬೇಕು. ಹಳಗನ್ನಡ ಕಾವ್ಯ ಓದುವಾಗ ಭಾವಗಳೂ ಸೇರದಿದ್ದರೆ ನೀರಸವಾಗುತ್ತದೆ. ಪದಗಳ ಒಡೆಯುವಿಕೆ ಸಂದರ್ಭದಲ್ಲಿ ಎಚ್ಚರಿಕೆ ತಪ್ಪಿದರೆ ಅನರ್ಥ ಉಂಟಾಗುತ್ತದೆ. ಹೀಗಾಗಿ ಸಾಹಿತ್ಯದ ಕಾಲಘಟ್ಟ ಯಾವುದೇ ಆಗಿದ್ದರೂ ಅದನ್ನು ಓದುವಾಗ ಆತ್ಮವಿಶ್ವಾಸ ಅಗತ್ಯ ಎಂದು ಉಡುಪಿಯ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಪಿ.ಬಿ. ಪ್ರಸನ್ನ ಹೇಳಿದರು.
ಉಡುಪಿಯ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯುಎಸಿ ಆಶ್ರಯದಲ್ಲಿ ಆಯೋಜಿಸಿದ್ದ 'ಕಬ್ಬದುಳುಮೆ' ಕಾರ್ಯಕ್ರಮದ ಸಮಾರೋಪ ಹಾಗೂ ದ್ವಿತೀಯ ಎಂಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಶಿವಾನಿ ಶೆಟ್ಟಿ, ಸುಶ್ಮಿತಾ ಶೆಟ್ಟಿ, ಕೃಷ್ಣ, ರಕ್ಷಿತಾ, ಜ್ಯೋತಿ, ಪ್ರವೀಣ್ ಇತರರು ಕಬ್ಬದುಳುಮೆ ಕಾರ್ಯಕ್ರಮದ ಪ್ರಯೋಜನದ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ್ ವಿ. ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ಐಕ್ಯುಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ಉಪನ್ಯಾಸಕರಾದ ಸಂಧ್ಯಾರಾಣಿ, ಲತಾ ನಾಯಕ್, ಭವ್ಯಾ ರೈ, ಶಾಲಿನಿ ಯು.ಬಿ. ಉಪಸ್ಥಿತರಿದ್ದರು.
ಸ್ನೇಹಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚನಾ ವಂದಿಸಿದರು. ಪ್ರಸಕ್ತ ವರ್ಷದಲ್ಲಿ ಕನ್ನಡ ವಿಭಾಗದ ಸಾಧನಾ ವರದಿಯನ್ನು ಭಾರತಿ ಮಂಡಿಸಿದರು. ಶರಿತಾ ಕಾರ್ಯಕ್ರಮ ನಿರೂಪಿಸಿದರು.