ಕಲೆಗಳಿಂದ ಮಕ್ಕಳಲ್ಲಿ ಸೃಜನಶೀಲ ಗುಣ

ಹಾವಂಜೆಯಲ್ಲಿ ಸಂಯೋಜಿಸಿದ್ದ 'ಬಾಲ ಲೀಲಾ' ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಕಲಾವಿದ ವೆಂಕಟರಮಣ ಭಟ್​ ಅವರಿಗೆ 'ವಿಶ್ವ ಕಲಾ ಸಿಂಧು' ಪ್ರಶಸ್ತಿ ಪ್ರದಾನ ಮಾಡಲಾಯಿತು. ರಮೇಶ್​ ವೈದ್ಯ, ಹಾವಂಜೆ ಮಂಜುನಾಥ್​ ರಾವ್​, ವಿನೋದ್​ರಾಜ್​ ಭಟ್​ ಮುಕ್ತಾ ಬಾಯಿ, ರತ್ನಾಕರ್​ ಮೊಗವೀರ, ಶಾರದಾ ನಾಯಕ್​, ಡಾ. ಜನಾರ್ದನ್​ ರಾವ್​ ಇದ್ದರು.
ಹಾವಂಜೆಯಲ್ಲಿ ಸಂಯೋಜಿಸಿದ್ದ 'ಬಾಲ ಲೀಲಾ' ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಕಲಾವಿದ ವೆಂಕಟರಮಣ ಭಟ್​ ಅವರಿಗೆ 'ವಿಶ್ವ ಕಲಾ ಸಿಂಧು' ಪ್ರಶಸ್ತಿ ಪ್ರದಾನ ಮಾಡಲಾಯಿತು. ರಮೇಶ್​ ವೈದ್ಯ, ಹಾವಂಜೆ ಮಂಜುನಾಥ್​ ರಾವ್​, ವಿನೋದ್​ರಾಜ್​ ಭಟ್​ ಮುಕ್ತಾ ಬಾಯಿ, ರತ್ನಾಕರ್​ ಮೊಗವೀರ, ಶಾರದಾ ನಾಯಕ್​, ಡಾ. ಜನಾರ್ದನ್​ ರಾವ್​ ಇದ್ದರು.
Published on

* ಕಲಾವಿದ ವೆಂಕಟರಮಣ ಭಟ್​ ಅನಿಸಿಕೆ

* ವಿಶ್ವ ಕಲಾಸಿಂಧು, ಭಾವನಾ ಪ್ರಶಸ್ತಿ ಪ್ರದಾನ

ಉಡುಪಿ: ಮನೆಗೊಂದು ಒಲೆ, ಮನಕೊಂದು ಕಲೆ ಎಂಬ ನಾಣ್ಣುಡಿಯಂತೆ ಚಿತ್ರಕಲೆಯು ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾ ಪ್ರಕಾರವಾಗಿದೆ. ಚಿಣ್ಣರು ನಿತ್ಯ ಸೃಜನಶೀಲರಾಗಿರಲು ಇವು ಪೂರಕ. ಗ್ರಾಮೀಣ ಭಾಗದಲ್ಲಿ ಇಂತಹ ವಿಶಿಷ್ಟ ಶಿಬಿರ ಆಯೋಜಿಸಿ ಮಕ್ಕಳಿಗೆ ವಿವಿಧ ಕಲೆಗಳ ಚಟುವಟಿಕೆ ಹಮ್ಮಿಕೊಂಡಿರುವುದು ಅರ್ಥಪೂರ್ಣ ಎಂದು ಖ್ಯಾತ ಕಲಾವಿದ ವೆಂಕಟರಮಣ ಭಟ್​ ಸಂತಸ ವ್ಯಕ್ತಪಡಿಸಿದರು.
ಭಾವನಾ ಫೌಂಡೇಷನ್​(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಗ್ರಾಮೀಣ ಭಾಗದ ಮಕ್ಕಳಿಗಾಗಿ 4 ದಿನಗಳ ಕಾಲ ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸಂಯೋಜಿಸಿದ್ದ 'ಬಾಲ ಲೀಲಾ' ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ 'ವಿಶ್ವ ಕಲಾಸಿಂಧು' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರೊಜೆಕ್ಟರ್​ ಉದ್ಘಾಟನೆ

ಖ್ಯಾತ ಪಾಕಶಾಸ್ತ್ರ ತಜ್ಞ ವಿನೋದ್​ರಾಜ್​ ಭಟ್​ ಅವರಿಗೆ 'ಭಾವನಾ' ಪುರಸ್ಕಾರ ನೀಡಿ ಗೌರವಿಸಲಾಯಿತು.
ಖ್ಯಾತ ಪಾಕಶಾಸ್ತ್ರ ತಜ್ಞ ವಿನೋದ್​ರಾಜ್​ ಭಟ್​ ಅವರಿಗೆ 'ಭಾವನಾ' ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ಣಾಟಕ ಬ್ಯಾಂಕ್​ ಉಡುಪಿ ವಿಭಾಗದ ಎಜಿಎಂ ರಮೇಶ್​ ವೈದ್ಯ ಅವರು ವಿವಿಧ ಉದ್ದೇಶಗಳಿಗಾಗಿ ಫೌಂಡೇಷನ್​ಗೆ ನೀಡಿದ ಪ್ರೊಜೆಕ್ಟರ್​ ಉದ್ಘಾಟಿಸಿ ಶುಭ ಹಾರೈಸಿದರು.
ಯಕ್ಷಗುರು ಹಾವಂಜೆ ಮಂಜುನಾಥ್​ ರಾವ್​ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಪೊಲೀಸ್​ ಠಾಣೆಯ ಉಪನಿರೀಕ್ಷಕಿ ಮುಕ್ತಾ ಬಾಯಿ, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರತ್ನಾಕರ್​ ಮೊಗವೀರ, ಬಾಳೆಬೈಲು ಸರ್ಕಾರಿ ಪ್ರಾಥಮಿಕ ಶಾಲೆಯ ಉಪನ್ಯಾಸಕಿ ಶಾರದಾ ನಾಯಕ್​ ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕ, ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಅಕ್ಷತಾ ವಿಶು ರಾವ್​ ಸನ್ಮಾನಪತ್ರ ವಾಚಿಸಿದರು. ವಿಶುರಾವ್​ ಹಾವಂಜೆ ವಂದಿಸಿದರು.
"

ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ 'ಬಾಲ ಲೀಲಾ' ಕಲಾ ಚಟುವಟಿಕೆಗಳ ಶಿಬಿರ ಉಪಯುಕ್ತವಾಗಿದೆ. ನಾವುಗಳು ಚಿಕ್ಕವರಿದ್ದಾಗ ರಜಾ ದಿನಗಳಲ್ಲಿ ಗುಂಪುಗೂಡಿ ವಿವಿಧ ಆಟ ಆಡುತ್ತಿದ್ದೆವು. ಆದರೆ, ಇಂದಿನ ಕುಟುಂಬಗಳೂ ಚಿಕ್ಕದಾಗಿದ್ದು, ಮಕ್ಕಳಲ್ಲಿ ಮೊಬೈಲ್​ ಗೀಳು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕ್ರಮ ನಿಜಕ್ಕೂ ಶ್ಲಾಘನೀಯ.

— ರಮೇಶ್​ ವೈದ್ಯ. ಕರ್ಣಾಟಕ ಬ್ಯಾಂಕ್​ ಉಡುಪಿ ವಿಭಾಗದ ಎಜಿಎಂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net