ಉಡುಪಿಯ ಜಿಲ್ಲಾ ಕಾರಾಗೃಹದಲ್ಲಿ ಜೈಲುವಾಸಿಗಳಿಗೆ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪದಲ್ಲಿ ಅಬೀದ್ ಗದ್ಯಾಳ್ ಮಾತನಾಡಿದರು. ವಿಜಯಕುಮಾರ್ ಡಿ. ಚವ್ಹಾಣ, ಗಂಗಾಧರ್ ಎಚ್.ಕೆ., ಹರೀಶ್ ಜಿ., ಅರುಣ್ ಬಿ., ಡಾ. ಬೊಮ್ಮಯ್ಯ ಎಂ. ಇದ್ದರು.
Published on:
Copied
Follow Us
* ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಭಿಪ್ರಾಯ
* ಜೈಲುವಾಸಿಗಳಿಗೆ ಉದ್ಯಮಶೀಲತಾ ತರಬೇತಿಯ ಸಮಾರೋಪ
ಉಡುಪಿ: ಯಾವುದೇ ಉದ್ಯಮದಲ್ಲಿ ತೊಡಗಿದಾಗ ಅದಕ್ಕೆ ತಕ್ಕುದಾದ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ. ಉದ್ಯಮದಲ್ಲಿ ಉನ್ನತಿ ಸಾಧಿಸಲು ಆ ಕುರಿತು ನಿಷ್ಠೆ ಬೆಳೆಸಿಕೊಳ್ಳಬೇಕು. ಅದರಿಂದ ಯಶಸ್ವಿಯಾಗಿ ಉದ್ಯಮ ನಡೆಸಲು ಸಾಧ್ಯ. ಇಂದು ಸ್ವಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕರಿಸುವ ರುಡ್ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅಭಿಪ್ರಾಯಪಟ್ಟರು.
ಉಡುಪಿಯ ಹಿರಿಯಡ್ಕದಲ್ಲಿರುವ ಕಾರಾಗೃಹದಲ್ಲಿ ಉಡುಪಿ ಜಿಪಂ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ಜಿಲ್ಲಾ ಕಾರಾಗೃಹ ಹಿರಿಯಡ್ಕ ಮತ್ತು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ಆಶ್ರಯದಲ್ಲಿ ಆರು ದಿನಗಳ ಕಾಲ ಜೈಲುವಾಸಿಗಳಿಗೆ ಆಯೋಜಿಸಿದ್ದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಲೀಡ್ ಮೆನೇಜರ್ ಹರೀಶ್ ಜಿ., ಉಡುಪಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಅರುಣ್ ಬಿ., ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮಾತನಾಡಿದರು. ಉಡುಪಿ ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ್ ಡಿ. ಚವ್ಹಾಣ ಅಧ್ಯತಕ್ಷತೆ ವಹಿಸಿದ್ದರು.
ಜಿಲ್ಲಾ ಕಾರಾಗೃಹದ ಸಿಬ್ಬಂದಿ ರೇಷ್ಮಾ ನಾಯಕ್ ಸ್ವಾಗತಿಸಿದರು. ಕಚೇರಿಯ ಹಿರಿಯ ಸಹಾಯಕಿ ಶ್ರುತಿ ಪಿ.ಕುಮ್ಟಾಕರ್ ವಂದಿಸಿದರು. ಕಚೇರಿಯ ಸಹಾಯಕ ಶಾಂತಪ್ಪ ಕಾರ್ಯಕ್ರಮ ನಿರೂಪಿಸಿದರು.
"
ಅಪರಾಧಿಕ ಮನೋಭಾವನೆಯಿಂದ ಹೊರಬಂದು ಸಮಾಜದಲ್ಲಿ ಎಲ್ಲರೊಂದಿಗೆ ಒಳ್ಳೆಯ ಜೀವನ ಮಾಡಬೇಕು. ಬ್ಯಾಂಕಿನಿಂದ ಸಿಗುವ ಸಾಲ-ಸೌಲಭ್ಯ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿರಿ. ಬದುಕಿನಲ್ಲಿ ಛಲವಿದ್ದರೆ ಎಲ್ಲಿ ಬೇಕಾದರೂ ಜೀವನ ಕಟ್ಟಿಕೊಳ್ಳಬಹುದು. ಮುಂದಿನ ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ.
— ಗಂಗಾಧರ್ ಎಚ್.ಕೆ. ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ.