ಚಿತ್ರಕಲೆಗಿಲ್ಲ ಯಾವುದೇ ಭಾಷೆಯ ಪರಿಧಿ

ಉಡುಪಿಯಲ್ಲಿ ಆಯೋಜಿಸಿದ್ದ 'ಪಾವನಿ' ಚಿಣ್ಣರ ಬಣ್ಣದ ಹಬ್ಬ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ವಿಶ್ವವಲ್ಲಭ ಶ್ರೀ ಬಹುಮಾನ ವಿತರಿಸಿದರು. ಎಂ. ಗಂಗಾಧರ ರಾವ್​, ಸರಸ್ವತಿ ಜಿ. ರಾವ್​, ಕೆ. ಗಣೇಶ್​ ರಾವ್​, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಪ್ರೊ. ಕೆ. ಸದಾಶಿವ್​ ರಾವ್​, ಕೆ. ಬಾಲಕೃಷ್ಣ, ಎಂ. ಕಾರ್ತಿಕ್​ ರಾವ್​, ಡಾ. ನಿಶ್ಚಿತಾ ಕೆ. ರಾವ್​, ಕೆ. ಸದಾಶಿವ್​ ಭಟ್​ ಇತರಿದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ 'ಪಾವನಿ' ಚಿಣ್ಣರ ಬಣ್ಣದ ಹಬ್ಬ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ವಿಶ್ವವಲ್ಲಭ ಶ್ರೀ ಬಹುಮಾನ ವಿತರಿಸಿದರು. ಎಂ. ಗಂಗಾಧರ ರಾವ್​, ಸರಸ್ವತಿ ಜಿ. ರಾವ್​, ಕೆ. ಗಣೇಶ್​ ರಾವ್​, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಪ್ರೊ. ಕೆ. ಸದಾಶಿವ್​ ರಾವ್​, ಕೆ. ಬಾಲಕೃಷ್ಣ, ಎಂ. ಕಾರ್ತಿಕ್​ ರಾವ್​, ಡಾ. ನಿಶ್ಚಿತಾ ಕೆ. ರಾವ್​, ಕೆ. ಸದಾಶಿವ್​ ಭಟ್​ ಇತರಿದ್ದರು.
Published on

* ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಶೀರ್ವಚನ

* 'ಪಾವನಿ' ಚಿಣ್ಣರ ಬಣ್ಣದ ಹಬ್ಬದ ಸಮಾರೋಪ

ಉಡುಪಿ: ನೂರಾರು ವಾಕ್ಯಗಳಲ್ಲಿ ಹೇಳಬಹುದಾದ ವಿಷಯವನ್ನು ಒಂದು ಚಿಕ್ಕ ಚಿತ್ರದ ಮೂಲಕ ಹೇಳ ಬಹುದು. ಭಾವಾಭಿವ್ಯಕ್ತಿಗೆ ರೇಖೆಗಳು, ಚಿತ್ರಗಳು ಅತ್ಯುತ್ತಮ ಮಾಧ್ಯಮವಾಗಿದ್ದು, ಚಿತ್ರಕಲೆಗೆ ಯಾವುದೇ ಭಾಷೆಯ ಪರಿಧಿ ಇಲ್ಲ. ಹೀಗಾಗಿ ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯೂ ಸಹ ಬಹುಮಾನ ಪಡೆಯುವಷ್ಟೇ ಮುಖ್ಯ ಸಂಗತಿಯಾಗಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಉಡುಪಿ ಕನ್ನರ್ಪಾಡಿಯ ಎಂ. ಗಂಗಾಧರ ರಾವ್​ ಹಾಗೂ ಸರಸ್ವತಿ ಜಿ. ರಾವ್​ ದಂಪತಿ ಆಯೋಜಿಸಿದ್ದ 'ಪಾವನಿ' ಚಿಣ್ಣರ ಬಣ್ಣದ ಹಬ್ಬದ ನಿಮಿತ್ತ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾದ ಕೆ. ಗಣೇಶ್​ ರಾವ್​, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಪ್ರೊ. ಕೆ. ಸದಾಶಿವ್​ ರಾವ್​ ಮಾತನಾಡಿ, ಕನ್ನಡ ಮಾಧ್ಯಮ ಕಲಿಕೆಯ ಮಹತ್ವ ಹಾಗೂ ಬೆಳೆಯುವ ಮಕ್ಕಳಲ್ಲಿ ಚಿತ್ರಕಲೆ ಬೆಳೆಸುವ ಗುಣ, ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪಾಲಕರ ಪಾತ್ರದ ಕುರಿತು ಮಾತನಾಡಿದರು.
ಕೆ. ಸದಾಶಿವ್​ ಭಟ್​, ಕೆ. ಬಾಲಕೃಷ್ಣ, ಎಂ. ಕಾರ್ತಿಕ್​ ರಾವ್​, ಡಾ. ನಿಶ್ಚಿತಾ ಕೆ. ರಾವ್​ ಉಪಸ್ಥಿತರಿದ್ದರು.

40 ವಿದ್ಯಾರ್ಥಿಗಳಿಗೆ ಬಹುಮಾನ

ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಕಲಾವಿದ ಯು. ರಮೇಶ್​ ರಾವ್​, ಗಾಯತ್ರಿ ನಾಯಕ್​, ಎ. ನಟರಾಜ್​ ಉಪಾಧ್ಯಾಯ ಸಹಕರಿಸಿದರು. ಉಡುಪಿ ಜಿಲ್ಲೆಯ 1ರಿಂದ 9ನೇ ತರಗತಿಯರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧನಕರ ಬಹುಮಾನ ಸೇರಿ ನಗದು ಪುರಸ್ಕಾರ ಸಹಿತ 40 ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. 300ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿಯ ಲೋಕಾಯುಕ್ತದ ಪೊಲೀಸ್​ ಇನ್ಸ್​ಪೆಕ್ಟರ್​ ಮಂಜುನಾಥ್​ ಶಂಕರಹಳ್ಳಿ 'ಸೈಬರ್​ ಅಪರಾಧಗಳು' ಕುರಿತು ಹಾಗೂ ಮನೋತಜ್ಞ ಡಾ. ವಿರೂಪಾಕ್ಷ ದೇವರಮನೆ ಅವರು 'ಪಾಲಕತ್ವ' ಎಂಬ ವಿಷಯ ಕುರಿತು ಮಾತನಾಡಿದರು. ಪಾಲ್ಗೊಂಡಿದ್ದ ಗಣ್ಯರಿಗೆ ಪಾವನಿ ಬಿಡಿಸಿದ ಚಿತ್ರದ ಪ್ರತಿಕೃತಿ ನೀಡಿ ಶ್ರೀಗಳು ಆಶೀರ್ವದಿಸಿದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಜಿ. ರಾವ್​ ಸ್ಪರ್ಧಾವಿಜೇತರ ಹೆಸರು ವಾಚಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ಕಲಾರಂಗದ ಸದಸ್ಯರು, ವಿದ್ಯಾಪೋಷಕ್​ ವಿದ್ಯಾರ್ಥಿಗಳು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net