ಮಹಿಳಾ ಸಮಾನತೆ ಇನ್ನೂ ಮರೀಚಿಕೆ

ಉಡುಪಿಯಲ್ಲಿ ರೆಡ್​ಕ್ರಾಸ್​ ವತಿಯಿಂದ ನಡೆದ ಮಹಿಳಾ ದಿನಾಚರಣೆ ಸಪ್ತಾಹದ ಸಮಾರೋಪದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಗೀತಾ ಸುರತ್ಕಲ್​, ಬಸ್ರೂರು ರಾಜೀವ್​ ಶೆಟ್ಟಿ, ಡಾ. ಗಣನಾಥ ಶೆಟ್ಟಿ, ಪೂರ್ಣಿಮಾ, ಡಾ.ನಿಕೇತನಾ, ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್​, ರಮಾದೇವಿ, ರಾವೇಂದ್ರ ಪ್ರಭು ಕರ್ವಾಲು, ಭಾರತಿ ಮರವಂತೆ ಇತರರಿದ್ದರು.
ಉಡುಪಿಯಲ್ಲಿ ರೆಡ್​ಕ್ರಾಸ್​ ವತಿಯಿಂದ ನಡೆದ ಮಹಿಳಾ ದಿನಾಚರಣೆ ಸಪ್ತಾಹದ ಸಮಾರೋಪದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಗೀತಾ ಸುರತ್ಕಲ್​, ಬಸ್ರೂರು ರಾಜೀವ್​ ಶೆಟ್ಟಿ, ಡಾ. ಗಣನಾಥ ಶೆಟ್ಟಿ, ಪೂರ್ಣಿಮಾ, ಡಾ.ನಿಕೇತನಾ, ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್​, ರಮಾದೇವಿ, ರಾವೇಂದ್ರ ಪ್ರಭು ಕರ್ವಾಲು, ಭಾರತಿ ಮರವಂತೆ ಇತರರಿದ್ದರು.
Published on

* ಚಲನಚಿತ್ರ ನಟಿ ಗೀತಾ ಸುರತ್ಕಲ್​ ಅನಿಸಿಕೆ

* ಮಹಿಳಾ ದಿನಾಚರಣೆಯ ಸಪ್ತಾಹ ಸಮಾರೋಪ

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಮಹಿಳೆಗೆ ಗೌರವಾನ್ವಿತ ಸ್ಥಾನ-ಮಾನ ದೊರೆತರೂ ಸಹ ಇನ್ನೂ ಸಮಾನತೆ ಮರೀಚಿಕೆಯಾಗಿದೆ. ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಂಡರೆ ಸಮಾನತೆ ಪಡೆಯಲು ಸಾಧ್ಯ. ಈ ದೃಷ್ಟಿಯಿಂದ ಅರಿವು ಮೂಡಿಸುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣಾ ಸಪ್ತಾಹವು ಸಾರ್ಥಕ ಕಾರ್ಯಕ್ರಮವಾಗಿದೆ ಎಂದು ಚಲನಚಿತ್ರ ನಟಿ ಗೀತಾ ಸುರತ್ಕಲ್​ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯಲ್ಲಿರುವ ಭಾರತೀಯ ರೆಡ್​ ಕ್ರಾಸ್​ ಭವನದ ಜಿಲ್ಲಾ ಶಾಖೆಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್​ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ, 'ಮಹಿಳೆ-ರಂಗಭೂಮಿ ಮತ್ತು ಕಾರಂತರ ಬರಹಗಳು' ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಮಹಿಳಾ ದಿನಾಚರಣೆಯ ಸಪ್ತಾಹ ಸಾವಿರಾರು ವಿದ್ಯಾರ್ಥಿಗಳಲ್ಲಿ ಮಹಿಳಾ ಸಮಾನತೆಯ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.

ಸಾಧಕಿಯರಿಗೆ ಸನ್ಮಾನ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ರೆಡ್​ಕ್ರಾಸ್​ ವತಿಯಿಂದ ಡಾ. ಪಾರ್ವತಿ ಜಿ. ಐತಾಳ್​, ಕ್ಯಾಪ್ಟನ್​ ಡಾ. ಸುಕನ್ಯಾ ಮಾರ್ಟಿಸ್​, ಸುಜಯಾ ಕೆ.ಎಸ್​., ಶ್ಯಾಮಲಾ ಸಿ.ಕೆ., ಕುಸುಮಾ ಕಾಮತ್​ ಅವರನ್ನು ಸನ್ಮಾನಿಸಲಾಯಿತು. ರಂಗವಲ್ಲಿ ಮೂಲಕ 'ಮಾನವ ಹಕ್ಕುಗಳ ಪರಿಚಯ ಸ್ಪರ್ಧೆ'ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕರ್ನಾಟಕ ರಾಜ್ಯ ರೆಡ್​ ಕ್ರಾಸ್​ನ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೆಡ್​ ಕ್ರಾಸ್​ ಆಡಳಿತ ಮಂಡಳಿಯ ಸದಸ್ಯರಾದ ವಿ.ಜಿ. ಶೆಟ್ಟಿ, ಟಿ.ಚಂದ್ರಶೇಖರ್​, ಖಚಾಂಚಿ ರಮಾದೇವಿ, ರಾಘವೇಂದ್ರ ಪ್ರಭು ಕರ್ವಾಲು, ಡಾ. ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯರಾದ ಡಾ. ಭಾರತಿ ಮರವಂತೆ. ಮಹಮ್ಮದ್​ ಶರೀಫ್​, ಸತೀಶ್​ ಕೊಡವೂರು ಉಪಸ್ಥಿತರಿದ್ದರು.
ಪ್ರಾಧ್ಯಾಪಕಿ ದಿವ್ಯಾ ಎಂ.ಎಸ್​. ಪ್ರಾರ್ಥಿಸಿದರು. ಡಾ. ಶಿವರಾಮ ಕಾರಂತ ಟ್ರಸ್ಟ್​ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ನಿಕೇತನಾ ವಂದಿಸಿದರು. ಉಪನ್ಯಾಸಕಿ ಶಾಲಿನಿ ಕಾರ್ಯಕ್ರಮ ನಿರ್ವಹಿಸಿದರು. ಸಪ್ತಾಹದ ನಿಮಿತ್ತ ಉಡುಪಿ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net