ಡಾ. ಜಿ.ಶಂಕರ್​ ಕಾಲೇಜಿನ ಎನ್​ಎಸ್​ಎಸ್​ ವಾರ್ಷಿಕ ಶಿಬಿರ ಸಂಪನ್ನ

ಉಡುಪಿಯ ಹಿರಿಯಡ್ಕ ಕಾಲೇಜಿನಲ್ಲಿ ನಡೆದ ಡಾ. ಜಿ.ಶಂಕರ್​ ಮಹಿಳಾ ಕಾಲೇಜಿನ ಎನ್​ಎಸ್​ಎಸ್​  ಶಿಬಿರದ ಸಮಾರೋಪದಲ್ಲಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿದರು. ಡಾ. ಎನ್​.ಎಸ್​. ಶೆಟ್ಟಿ, ಸೋಜನ್​ ಕೆ.ಜಿ., ಡಾ. ಜಯಪ್ರಕಾಶ್​ ಶೆಟ್ಟಿ, ವಾಸುದೇವ್​ ಭಟ್​, ಡಾ. ದಿವ್ಯಾ ಎಂ.ಎಸ್​., ಡಾ. ಜಯಮಂಗಳಾ ಇತರರಿದ್ದರು.

Published on

* ಹಿರಿಯಡ್ಕ ಕಾಲೇಜಿನಲ್ಲಿ ಸಮಾರೋಪ ಸಮಾರಂಭ

ಉಡುಪಿ: ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ-2026ರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮ ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ ನಡೆಯಿತು.
ರೆಡ್​ ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ನಿಟ್ಟೆ ವಿಶ್ವವಿದ್ಯಾನಿಲಯದ ಎಮಿರೆಟಸ್​ ಪ್ರೊಫೆಸರ್​ ಡಾ. ಎನ್​.ಎಸ್​. ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾಲೇಜ್​ನ ಪ್ರಾಂಶುಪಾಲ ಸೋಜನ್​ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು.
ಹಿರಿಯಡ್ಕ ಕಾಲೇಜ್​ನ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್​ ಶೆಟ್ಟಿ, ಎನ್​.ಪಿ. ಇಂಡಸ್ಟ್ರೀಸ್​ನ ಮಾಲೀಕ ವಾಸುದೇವ್​ ಭಟ್​, ಕೆನರಾ ಬ್ಯಾಂಕ್​ನ ಐಟಿ ಮೆನೇಜರ್​ ಅಪ್ಪು ನಾಯಕ್​, ಉದ್ಯಮಿಗಳಾದ ಪ್ರಕಾಶ್​ ಶೆಟ್ಟಿ, ರತ್ನಾಕರ್​ ಶೆಟ್ಟಿ, ಉಡುಪಿ ಜಿಲ್ಲೆಯ ಎನ್​ಎಸ್​ಎಸ್​ ನೋಡಲ್​ ಅಧಿಕಾರಿ ಡಾ. ರಾಜೇಂದ್ರ ಕೆ., ಸಹಶಿಬಿರಾಧಿಕಾರಿಗಳಾದ ಡಾ. ದಿವ್ಯಾ ಎಂ.ಎಸ್​., ವೆಂಕಟೇಶ್​ ಮತ್ತು ಕೃಷ್ಣರಾಜ್​ ಭಟ್​ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಡಾ. ಜಯಮಂಗಳಾ ಸ್ವಾಗತಿಸಿದರು. ಡಾ. ರವೀಶ್​ ಬಿ. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net