ಸಮುದ್ರ ಪಾಲಾಗಿದ್ದ ಬಲೆ ತೆರವು

 ಸಮುದ್ರದಲ್ಲಿ ಮುಳುಗಿದ್ದ ಶ್ರೀ ಬಾಲಾಂಜನೇಯ ಬೋಟಿನಲ್ಲಿದ್ದ ಬಲೆಗಳನ್ನು ಹೊರತೆಗೆಯಲಾಯಿತು.
ಸಮುದ್ರದಲ್ಲಿ ಮುಳುಗಿದ್ದ ಶ್ರೀ ಬಾಲಾಂಜನೇಯ ಬೋಟಿನಲ್ಲಿದ್ದ ಬಲೆಗಳನ್ನು ಹೊರತೆಗೆಯಲಾಯಿತು.
Published on

ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಸಮುದ್ರದ ನೀರಿನಲ್ಲಿ ಆ.26ರಂದು ಮುಳುಗಿದ್ದ ‘ಶ್ರೀ ಬಾಲಾಂಜನೇಯ’ ಬೋಟಿನಲ್ಲಿದ್ದ ಬಲೆಗಳನ್ನು ಮೂರು ದಿನಗಳ ಬಳಿಕ ಸಮುದ್ರದಿಂದ ಹೊರತೆಗೆಯಲಾಗಿದೆ.

ಕಾಂಚನಗಂಗಾ ಬೋಟಿನ ವಾಲೀಕ ಚಂದ್ರ ಖಾರ್ವಿ ನೀಡಿದ ವಾಹಿತಿ ಮೇರೆಗೆ ಗಂಗೊಳ್ಳಿ ಮೀನುಗಾರಿಕೆ ಬಂದರಿನಿಂದ ಪರ್ಸಿನ್ ಬೋಟಿನಲ್ಲಿ 34 ಮಂದಿ ಮೀನುಗಾರರೊಂದಿಗೆ ತೆರಳಿದ ಗಂಗೊಳ್ಳಿಯ ಮುಳುಗುತಜ್ಞ ದಿನೇಶ ಖಾರ್ವಿ ಸಮುದ್ರ ಪಾಲಾದ ಬಲೆಗಳನ್ನು ಮೀನುಗಾರರ ಸಹಾಯದಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗ್ಗೆ 6 ಗಂಟೆಗೆ ತೆರಳಿದ್ದ ಈ ತಂಡ ನಿರಂತರ ಕಾರ್ಯಾಚರಣೆ ನಡೆಸಿ ಸಂಜೆ 4ರ ತನಕ ಸಮುದ್ರ ಮಧ್ಯದಲ್ಲಿ ನಿಂತು 700 ವಾರು ಉದ್ದದ ಬಲೆಯನ್ನು ದಡಕ್ಕೆ ತಂದು ಸಂಬಂಧಪಟ್ಟ ಬೋಟ್ ವಾಲೀಕರಿಗೆ ಒಪ್ಪಿಸಿದ್ದಾರೆ. ಸಮುದ್ರ ಪಾಲಾಗಿ ರಕ್ಷಿಸಲ್ಪಟ್ಟ ಬಲೆಯ ಮೌಲ್ಯ 30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net