ಅವಧಿ ಮೀರಿದ ಬ್ಯಾನರ್ ತೆರವುಗೊಳಿಸಿ

 ಸುಳ್ಯದಲ್ಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಜನಸಂಪರ್ಕ ಸಭೆಯಲ್ಲಿ ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿದರು. ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಎಸ್‌ಐ ಸಂತೋಷ್ ಕುಮಾರ್ ಬಿ.ಪಿ., ಪ್ರೊಬೆಷನರಿ ಎಸ್‌ಐ ಬಿ.ಜಿ.ಕೃಷ್ಣ ಉಪಸ್ಥಿತರಿದ್ದರು.
ಸುಳ್ಯದಲ್ಲಿ ಪೊಲೀಸ್ ಇಲಾಖೆಯ ಸಾರ್ವಜನಿಕ ಜನಸಂಪರ್ಕ ಸಭೆಯಲ್ಲಿ ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿದರು. ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಎಸ್‌ಐ ಸಂತೋಷ್ ಕುಮಾರ್ ಬಿ.ಪಿ., ಪ್ರೊಬೆಷನರಿ ಎಸ್‌ಐ ಬಿ.ಜಿ.ಕೃಷ್ಣ ಉಪಸ್ಥಿತರಿದ್ದರು.
Published on
ಸುಳ್ಯ: ಮಾದಕ ವಸ್ತುಗಳ ಹಾವಳಿ, ಫುಟ್‌ಪಾತ್ ಅತಿಕ್ರಮಣ, ಸಂಚಾರ ಸಮಸ್ಯೆ, ಗಡಿ ಭಾಗದ ಆಟೋರಿಕ್ಷಾಗಳಿಗೆ ವಿಧಿಸಲಾಗುತ್ತಿರುವ ದಂಡ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆ ಕುರಿತು ಭಾನುವಾರ ಕೇರ್ಪಳ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ಪೊಲೀಸ್ ಇಲಾಖೆ ಸಾರ್ವಜನಿಕ ಜನಸಂಪರ್ಕ ಸಭೆಯಲ್ಲಿ ಚರ್ಚೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಸಾರ್ವಜನಿಕರ ಅಹವಾಲು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗಡಿಭಾಗದಲ್ಲಿ ಮತ್ತು ನಗರದಲ್ಲಿ ಮಾದಕ ವಸ್ತುಗಳ ಹಾವಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು, ಅವಧಿ ಮೀರಿದ ಬ್ಯಾನರ್‌ಗಳ ತೆರವು, ಆಲೆಟ್ಟಿಬಡ್ಡಡ್ಕ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ನಿವೃತ್ತ ಪ್ರಾಂಶುಪಾಲ ದಾಮೋದರ ಗೌಡ, ಸುರೇಶ್ ಕಣೆಮರಡ್ಕ, ಪದ್ಮಯ್ಯ ಗೌಡ, ರಾಜೇಶ್, ಕೌಶಲ್, ವಿನೋದ್, ಮಾಧವ ಗೌಡ, ಸುದರ್ಶನ ಪಾತಿಕಲ್ಲು, ಚಿದಾನಂದ, ರಾಧಾಕೃಷ್ಣ ಬೈತ್ತಡ್ಕ, ರಶೀದ್ ಜಟ್ಟಿಪಳ್ಳ, ರಾಧಾಕೃಷ್ಣ ಪರಿವಾರಕಾನ, ಡಿ.ಎಂ.ಶಾರೀಕ್, ಸರಸ್ವತಿ, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಎಸ್‌ಐ ಸಂತೋಷ್ ಕುಮಾರ್ ಬಿ.ಪಿ., ಪ್ರೊಬೆಷನರಿ ಎಸ್‌ಐ ಬಿ.ಜಿ.ಕೃಷ್ಣ ಉಪಸ್ಥಿತರಿದ್ದರು.
ಹಸೈನಾರ್ ಜಯನಗರ ಸ್ವಾಗತಿಸಿದರು. ಎಸ್‌ಐ ಸಂತೋಷ್ ಕುಮಾರ್ ಬಿ.ಪಿ. ವಂದಿಸಿದರು.

ಯಾವುದೇ ದೂರು ದಾಖಲಾದ ತಕ್ಷಣ ಏಕಪಕ್ಷೀಯ ಕ್ರಮಕ್ಕೆ ಅವಕಾಶವಿಲ್ಲ. ಸಮಗ್ರ ಪರಿಶೀಲನೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಲಾಗುವುದು.

— ಅನಿಲ್ ಕುಮಾರ್ ಭೂಮರೆಡ್ಡಿ, ಎಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net