ಬೈಂದೂರು: ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘದ ವತಿಯಿಂದ ಭಾನುವಾರ ನಗರದ ವಿವಿಧ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಸಂಚಾಲಕ ಶಿವರಾಜ್ ಬೈಂದೂರು, ಜಿಲ್ಲಾ ಮುಖಂಡ ಸುರೇಶ್ ಬಾರ್ಕೂರು ಹಾಗೂ ಅಂಬೇಡ್ಕರ್ ಯುವಕ ಸಂಘದ ದಯಾನಂದ ಪಿ. ಚಾಲನೆ ನೀಡಿದರು.
ಬೈಂದೂರಿನ ರತ್ತುಬಾಯಿ ಜನತಾ ಪ್ರೌಢ ಶಾಲಾ ವಠಾರದಿಂದ ಆರಂಭಗೊಂಡ ಸ್ವಚ್ಛತಾ ಅಭಿಯಾನ ಪ್ರಮುಖ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಹಾಗೂ ತಹಸೀಲ್ದಾರ್ ಕಚೇರಿ ಆವರಣದಾದ್ಯಂತ ನಡೆಯಿತು. ಸಂಘದ ಸದಸ್ಯರು ಶ್ರಮದಾನದ ಮೂಲಕ ಸಾರ್ವಜನಿಕ ಪ್ರದೇಶವನ್ನು ಸ್ವಚ್ಛಗೊಳಿಸಿ ಪರಿಸರ ಜಾಗೃತಿ ಮೂಡಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಹಿಳಾ ಒಕ್ಕೂಟದ ಸದಸ್ಯೆ ಗೀತಾ ಎಸ್., ಬೈಂದೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನಯಾ, ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಉಪಸ್ಥಿತರಿದ್ದರು.