ಸಜೀಪ ಮುನ್ನೂರಿನಲ್ಲಿ ಸ್ವಚ್ಛಗ್ರಾಮ ಸಂಕಲ್ಪ

 ಸಜೀಪ ಮುನ್ನೂರು ಗ್ರಾಪಂನಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಶೂನ್ಯ ಕಸ ನಿರ್ವಹಣೆ ಮತ್ತು ಸ್ವಚ್ಛತೆಯ ವಿಶೇಷ ಕುರಿತು ಮಾಹಿತಿ ಮತ್ತು ಪ್ರೇರಣಾ ಕಾರ್ಯಕ್ರಮ ನಡೆಯಿತು. ಶೀನ ಶೆಟ್ಟಿ, ಗೋಕುಲ್‌ದಾಸ್, ಅಸೀಫಾ ಬೇಗಂ ಇದ್ದರು.
ಸಜೀಪ ಮುನ್ನೂರು ಗ್ರಾಪಂನಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಶೂನ್ಯ ಕಸ ನಿರ್ವಹಣೆ ಮತ್ತು ಸ್ವಚ್ಛತೆಯ ವಿಶೇಷ ಕುರಿತು ಮಾಹಿತಿ ಮತ್ತು ಪ್ರೇರಣಾ ಕಾರ್ಯಕ್ರಮ ನಡೆಯಿತು. ಶೀನ ಶೆಟ್ಟಿ, ಗೋಕುಲ್‌ದಾಸ್, ಅಸೀಫಾ ಬೇಗಂ ಇದ್ದರು.
Published on
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮ ಪಂಚಾಯಿತಿಯ ಎನ್‌ಆರ್‌ಎಲ್‌ಎಂ ತರಬೇತಿ ಕೇಂದ್ರದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಶೂನ್ಯ ಕಸ ನಿರ್ವಹಣೆ, ಸ್ವಚ್ಛ ಮನೆ ಸ್ವಯಂ ಘೋಷಣೆಯೊಂದಿಗೆ ಕಸಮುಕ್ತ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಝೇಂಕಾರ ಸಂಜೀವಿನಿ ಒಕ್ಕೂಟದ ಸದಸ್ಯರು ಸಂಕಲ್ಪ ಕೈಗೊಂಡರು. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಪ್ಲಾಸ್ಟಿಕ್ ಮತ್ತು ಸ್ಯಾನಿಟರಿ ಪ್ಯಾಡ್ ತ್ಯಾಜ್ಯಗಳಿಂದ ಉಂಟಾಗುವ ಮಾಲಿನ್ಯ, ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಹಸಿ ಕಸಗಳಿಂದ ಬಯೋಗ್ಯಾಸ್ ತಯಾರಿಸುವ ಕುಟುಂಬಗಳಿಗೆ ಪಂಚಾಯಿತಿ ಸಹಕಾರ ನೀಡುವುದಾಗಿ ಪಿಡಿಒ ಗೋಕುಲ್‌ದಾಸ್ ಭಕ್ತ ಭರವಸೆ ನೀಡಿದರು.
ಬಯೋ ಗ್ಯಾಸ್ ಅಳವಡಿಸಿರುವ ಮೂಲಕ ಸ್ವಚ್ಛತೆ ಕಾಯ್ದುಕೊಂಡಿರುವ ಸಂಜೀವಿನಿ ಒಕ್ಕೂಟದ ಎಂಬಿಕೆ ಸುನಿತಾ ಅವರನ್ನು ಗೌರವಿಸಲಾಯಿತು. ಒಕ್ಕೂಟದ ಹದಿನೈದು ಸದಸ್ಯರು ಸ್ವಚ್ಛ ಮನೆ ಸ್ವಯಂ ಘೋಷಣೆ ಪತ್ರಗಳನ್ನು ಸಲ್ಲಿಸಿದರು. ಏ.16ರಂದು ನಡೆಯಲಿರುವ ಸಂಜಜೀನಿ ಒಕ್ಕೂಟದ ಸದಸ್ಯರ ಮಹಾಸಭೆಯಲ್ಲಿ ಶೂನ್ಯ ಕಸ ನಿರ್ವಹಣೆಯ ಅರಿವು ಮೂಡಿಸುವುದರ ಜತೆಗೆ ಹತ್ತು ಮನೆಗಳಿಗೆ ಮಿನಿ ಬಯೋಗ್ಯಾಸ್ ಘಟಕ ಅಳವಡಿಸಲು ನಿರ್ಧರಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಅಸೀಫಾ ಬೇಗಂ, ಸ್ವಚ್ಛ ವಾಹಿನಿ ಚಾಲಕಿ ಬಬಿತಾ, ಎಲ್‌ಸಿಆರ್‌ಪಿ ಲಾವಣ್ಯಾ, ಜಮಾಲ್ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net