ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಜ್ಜರಕಾಡು ವಾರ್ಡ್ನ ಮಾಜಿ ನಗರಸಭಾ ಸದಸ್ಯೆ ರಶ್ಮಿ ಭಟ್, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆಂಡ್ ಆರ್ಕಿಟೆಕ್ಟ್ ಘಟಕದ ಅಧ್ಯಕ್ಷ ಭಗವಾನ್ ದಾಸ್ ಕೆ., ಕಾರ್ಯದರ್ಶಿ ಮಹೇಶ್ ಕಾಮತ್, ಕೋಶಾಧಿಕಾರಿ ಅಮಿತ್ ಅರವಿಂದ್ ನಾಯಕ್, ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ ಹಾಗೂ ಮಾಜಿ ಅಧ್ಯಕ್ಷ ಗೋಪಾಲ್ ಭಟ್, ಕ್ರೆಡಾಯ್ ಕೋಶಾಧಿಕಾರಿ ಕೃಷ್ಣ ಭಟ್ ಹಾಗೂ ಕ್ರೆಡಾಯ್ ಕಾರ್ಯದರ್ಶಿ ಅಮಿತ್ ಅರವಿಂದ್ ನಾಯಕ್ ಉಪಸ್ಥಿತರಿದ್ದರು. ಜಗದೀಶ್ ಆಚಾರ್ಯಕಾರ್ಯಕ್ರಮ ನಿರೂಪಿಸಿದರು. ಪರಿಸರ ದಿನಾಚರಣೆಯ ನೆನಪಿಗಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ಉಡುಪಿ ಸಂಕಲ್ಪ ಕೈಗೊಳ್ಳಲಾಯಿತು.