

ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಆರಿಕ್ಕಾಡಿ ಕುಂಡಾವು ಎಂಬಲ್ಲಿ ಕಾರು ಮತ್ತು ಬೈಕ್ ಸವಾರರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಪೊಲೀಸರು ಎರಡು ಕೇಸು ದಾಖಲಿಸಿಕೊಂಡಿದ್ದಾರೆ.
ಬೈಕ್ ಸವಾರ ಆರಿಕ್ಕಾಡಿ ಕೋಟೆ ಹಿತ್ತಿಲು ನಿವಾಸಿ ಪ್ರದೀಪ್ ಕುಮಾರ್(42) ನೀಡಿದ ದೂರಿನಂತೆ ಕಾರು ಚಾಲಕ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಾಗಿದೆ. ಸೆ.21ರಂದು ಸಂಜೆ ಆರಿಕ್ಕಾಡಿ ಕುಂಡಾವು ಎಂಬಲ್ಲಿ ಸ್ನೇಹಿತನ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಓವರ್‌ಟೇಕ್ ಮಾಡಿ ಕಾರೊಂದು ಅಪಾಯಕಾರಿಯಾಗಿ ಬರುತ್ತಿರುವುದನ್ನು ಕಂಡು ನಿಲ್ಲಿಸುವಂತೆ ತಿಳಿಸಿದಾಗ ಕಾರಿನಲ್ಲಿದ್ದ ಇಬ್ಬರು ತನಗೆ ಹಾಗೂ ಸ್ನೇಹಿತನಿಗೆ ಹಲ್ಲೆಗೆದಿರುವುದಾಗಿ ದೂರು ನೀಡಿದ್ದಾರೆ.
ಕಾರಿನಲ್ಲಿದ್ದ ತಾಯಕೊಡ್ಯಮೆ ನಿವಾಸಿ ಮೂಸಾ ಬಿ.ಪಿ.(38) ಪ್ರತಿದೂರು ನೀಡಿದ್ದಾರೆ. ಪ್ರದೀಪ್ ಕುಮಾರ್ ಮತ್ತು ಆತನ ಸ್ನೇಹಿತ ಬೈಕ್‌ನಲ್ಲಿ ಜೋರಾಗಿ ಮಾತನಾಡುತ್ತಾ ಸಂಚರಿಸುತ್ತಿದ್ದರು. ನಾವು ಕಾರು ನಿಲ್ಲಿಸಿ ಹೊರಗೆ ಬಂದಾಗ ಅವರಿಬ್ಬರೂ ತನಗೆ ಹಾಗೂ ಸಹೋದರಿ ಪುತ್ರ ಯಾಸಿರ್ (30)ಗೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ತನ್ನ ಪತ್ನಿ ಮೇಲೂ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮೂಸಾ ಆರೋಪಿಸಿದ್ದಾರೆ.