ಕಾಸರಗೋಡು: ಮುಂಗಾರು ಮಳೆ ಜಿಲ್ಲೆಯಲ್ಲಿ ಬಿರುಸು ಪಡೆದುಕೊಂಡಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಹೊಸದುರ್ಗದ ಸಿಎಸ್‌ಐ ಇಗರ್ಜಿ ಆವರಣ ಗೋಡೆ ಕುಸಿದಿದೆ. ಜೆಸಿಬಿ ಹಾಗೂ ಇತರ ಎರಡು ವಾಹನಗಳು ಮಣ್ಣಿನಡಿ ಸಿಲುಕಿದವು. ಮಣ್ಣುಕುಸಿದು ರಸ್ತೆಗೆ ಬಿದ್ದಿರುವುದರಿಂದ ಹಲವು ಕ್ವಾಟ್ರರ್ಸ್‌ಗಳ ಸಂಪರ್ಕ ರಸ್ತೆ ಬಂದ್ ಆಗಿದೆ.