ಉತ್ತಮ ಜೀವನ ಮೌಲ್ಯದಿಂದ ಸಾಧನೆ ಸಾಧ್ಯ

ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾದ ಗುರುಕುಲ ಕಾರ್ನಿವಲ್‌ನ್ನು ನಟ ಶನಿಲ್ ಗೌತಮ್ ಉದ್ಘಾಟಿಸಿದರು. ಅನುಪವಾ ಎಸ್.ಶೆಟ್ಟಿ,  ಡಾ.ರೂಪಾ ಶೆಣೈ ಇತರರು ಇದ್ದರು.
ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾದ ಗುರುಕುಲ ಕಾರ್ನಿವಲ್‌ನ್ನು ನಟ ಶನಿಲ್ ಗೌತಮ್ ಉದ್ಘಾಟಿಸಿದರು. ಅನುಪವಾ ಎಸ್.ಶೆಟ್ಟಿ, ಡಾ.ರೂಪಾ ಶೆಣೈ ಇತರರು ಇದ್ದರು.
Published on
ಕುಂದಾಪುರ: ವಿದ್ಯಾಸಂಸ್ಥೆಯಲ್ಲಿ ಸಿಗುವ ವಿದ್ಯಾಭ್ಯಾಸ ಮತ್ತು ಜೀವನ ಮೌಲ್ಯಗಳು ಜೀವನದಲ್ಲಿ ಸಾಧನೆ ವಾಡಲು ಸಹಕಾರಿಯಾಗುತ್ತದೆ. ನಾವು ವಾಡುವ ಕೆಲಸದಲ್ಲಿ ಖುಷಿ, ಸಂತೋಷ ಇದ್ದಾಗ ಅದನ್ನೇ ವಾಡಬೇಕು. ಮಕ್ಕಳಲ್ಲಿ ತಪ್ಪು-ಸರಿಯ ಅರಿವನ್ನು ಪಾಲಕರು ನೀಡಬೇಕು. ಮಕ್ಕಳನ್ನು ವಾರ್ಕ್ಸ್ ಕಾರ್ಡ್ ಹಿಂದೆ ಅಥವಾ ಸ್ಪರ್ಧಾತ್ಮಕ ಯುಗದ ಹಿಂದೆ ಕವಾಂಡೊ ತರಹ ಬೆಳೆಸಬಾರದು. ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟರೆ ಅವರು ಯಶಸ್ಸಿನ ಶಿಖರವನ್ನೇರಲು ಸಾಧ್ಯವಾಗುತ್ತದೆ ಎಂದು ಚಲನಚಿತ್ರ ನಟ ಶನಿಲ್ ಗೌತಮ್ ಹೇಳಿದರು.
ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ವಠಾರದಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾದ ಮಕ್ಕಳ ಹಬ್ಬ (ಗುರುಕುಲ ಕಾರ್ನಿವಲ್) ಸೋಮವಾರ ಉದ್ಘಾಟಿಸಿ ವಾತನಾಡಿದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಅನುಪವಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಗುರುಕುಲು ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಾ.ರೂಪಾ ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಷ್ಮಾ ಎಸ್. ವಂದಿಸಿದರು. ಶಿಕ್ಷಕಿ ಸಂಧ್ಯಾ ಅತಿಥಿಯನ್ನು ಪರಿಚಯಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮೀ ನಿರೂಪಿಸಿದರು.

ವಿವಿಧ ಕಾರ್ಯಕ್ರಮ

ಗುರುಕುಲ ಕಾರ್ನಿವಲ್‌ನಲ್ಲಿ ಮೂರರಿಂದ ಐದು ವರ್ಷದ ಮಕ್ಕಳಿಗೆ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಸ್ಪರ್ಧೆ, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಾಡಿದ ವಿದೂಷಿ ದೀಕ್ಷಾ ಅವರ ನಾಟ್ಯ ಪ್ರದರ್ಶನ, ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ ನಡೆಯಿತು. 50ಕ್ಕೂ ಅಧಿಕ ಮಕ್ಕಳು ಹಾಗೂ ಪಾಲಕರ ಆಹಾರ ಮಳಿಗೆಗಳು, ವೈವಿಧ್ಯಮಯ ಮಳಿಗೆಗಳು, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ನೀಡುವ ಉದ್ದೇಶದಿಂದ ವಿಶೇಷ ಆಕರ್ಷಣೆಯ ಬೇಬಿ ಶಾರ್ಕ್ ಟ್ಯಾಂಕ್, ಫೇಸ್ ಪೈಟಿಂಗ್, ರೋಬೋಟಿಕ್ ಕಾರ್ನರ್, ಗಾಳಿಪಟ ವಾಡುವ ಮತ್ತು ಹಾರಿಸುವ ಕಾರ್ಯಕ್ರಮ ನಡೆಯಿತು.

ಸಾಹಸ ಕ್ರೀಡೆಗಳು

ವಿದ್ಯಾರ್ಥಿಗಳ ಸಾಹಸ ಮನೋಭಾವಕ್ಕೆ ಅನುಗುಣವಾಗಿ ಬೆಂಗಳೂರಿನಿಂದ ವಿಶೇಷ ತರಬೇತಿ ಪಡೆದ ತಂಡದಿಂದ ಸಾಹಸ ಕ್ರೀಡೆಗಳಾದ ಕ್ಲೈಬಿಂಗ್ ವಾಲ್, ಬರ್ವಾ ಬ್ರಿಡ್ಜ್, ಬರ್ವಾ ಲೂಪ್ಸ್, ಬ್ಯಾಲೆನ್ಸ್ ಬೀಮ್, ನೆಟ್ ಕ್ಲೈಬಿಂಗ್, ಪ್ಯಾರಲಲ್ ರೋಪ್, ಜಿಪ್ ಲೈನ್ ಮೊದಲಾದವು ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net