ಮಕ್ಕಳ ಬೇಡಿಕೆಗಳಿಗೂ ನೀಡಬೇಕಿದೆ ಮನ್ನಣೆ

ಗ್ರಾಮಸಭೆಯಲ್ಲಿ ತಲ್ಲೂರು ಶಾಲೆ ಪ್ರಭಾರ ಮುಖ್ಯಶಿಕ್ಷಕಿ ರತ್ನಾ ಪೂಜಾರಿ ಅವರಿಗೆ ತಲ್ಲೂರು ಗ್ರಾ.ಪಂ. ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಗುರುರಾಜ ಗಂಟಿಹೊಳೆ, ಗಿರೀಶ್ ನಾಯ್ಕ, ರಾಜೇಶ್ ಇತರರು ಇದ್ದರು.
ಗ್ರಾಮಸಭೆಯಲ್ಲಿ ತಲ್ಲೂರು ಶಾಲೆ ಪ್ರಭಾರ ಮುಖ್ಯಶಿಕ್ಷಕಿ ರತ್ನಾ ಪೂಜಾರಿ ಅವರಿಗೆ ತಲ್ಲೂರು ಗ್ರಾ.ಪಂ. ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಗುರುರಾಜ ಗಂಟಿಹೊಳೆ, ಗಿರೀಶ್ ನಾಯ್ಕ, ರಾಜೇಶ್ ಇತರರು ಇದ್ದರು.
Published on

ವಿಜಯವಾಣಿಸುದ್ದಿಜಾಲ ಕುಂದಾಪುರ

ಗ್ರಾಮದಲ್ಲಿಉತ್ತಮ ಶಿಕ್ಷಕರನ್ನು ಗೌರವಿಸುವಕಾರ್ಯವಾದಾಗ ಇನ್ನಷ್ಟು ಶಿಕ್ಷಕರಿಗೆಸಮಾಜಮುಖಿಯಾಗಿ ತೊಡಗಿಸಿಕೊಳ್ಳಲುಪ್ರೇರಣೆ ನೀಡಿದಂತಾಗುತ್ತದೆ.ಮಕ್ಕಳಬೇಡಿಕೆಗಳಿಗೂ ನಾವು ಮನ್ನಣೆನೀಡಬೇಕಿದೆ ಎಂದು ಬೈಂದೂರು ಶಾಸಕಗುರುರಾಜ ಗಂಟಿಹೊಳೆ ಹೇಳಿದರು.

ತಲ್ಲೂರುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವಠಾರದಲ್ಲಿ ಗುರುವಾರ ನಡೆದತಲ್ಲೂರು ಗ್ರಾಮ ಪಂಚಾಯಿತಿಯ2025-26ನೇಸಾಲಿನ ಮಕ್ಕಳ ಮತ್ತು ಮಹಿಳಾ ವಿಶೇಷಗ್ರಾಮಸಭೆಯಲ್ಲಿ ಮಾತನಾಡಿದರು.

ತಲ್ಲೂರುಗ್ರಾಪಂ ಅಧ್ಯಕ್ಷ ಗಿರೀಶ್ ನಾಯ್ಕಅಧ್ಯಕ್ಷತೆ ವಹಿಸಿದ್ದರು.ಸಭೆಯನೋಡಲ್ ಅಧಿಕಾರಿಯಾಗಿ ಕುಂದಾಪುರತಾಪಂನ ರಾಜೇಶ್ ಪಾಲ್ಗೊಂಡಿದ್ದರು.ಗ್ರಾಪಂಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ,ಸಾಮಾಜಿಕನ್ಯಾಯ ಸಮಿತಿ ಅಧ್ಯಕ್ಷ ಉದಯಕುಮಾರ್ ತಲ್ಲೂರು,ಸದಸ್ಯರು,ಮಂಗಳೂರುವಿಶ್ವವಿದ್ಯಾಲಯದ ಸೆನೆಟ್ ಸದಸ್ಯೆಜುಡಿತ್ ಮೆಂಡೋನ್ಸಾ,ಗ್ರಾಪಂವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರು,ವಿದ್ಯಾರ್ಥಿಪ್ರತಿನಿಧಿಗಳು,ಶಿಕ್ಷಕರು,ಮಕ್ಕಳುಉಪಸ್ಥಿತರಿದ್ದರು.

ವಿವಿಧಇಲಾಖಾ ಅಧಿಕಾರಿಗಳು ಮಾಹಿತಿನೀಡಿದರು.ನಮ್ಮಭೂಮಿ ಸಂಸ್ಥೆಯ ಆಶಾ ಪ್ರಾಸ್ತಾವಿಕವಾಗಿಮಾತನಾಡಿದರು.ಉಪ್ಪಿನಕುದ್ರುಶಾಲೆ ವಿದ್ಯಾರ್ಥಿ ಮಂಥನ್ಸ್ವಾಗತಿಸಿದರು.ಗ್ರಾಪಂಕಾರ್ಯದರ್ಶಿ ರತ್ನಾ ಹಿಂದಿನಸಭೆಯ ನಡಾವಳಿ ಮಂಡಿಸಿದರು.ಪಿಡಿಒಗಣೇಶ್ ಸಭೆ ನಿರ್ವಹಿಸಿದರು.

ಸಾಧಕರಿಗೆಸನ್ಮಾನ

ತಲ್ಲೂರುಶಾಲೆ ಪ್ರಭಾರ ಮುಖ್ಯಶಿಕ್ಷಕಿರತ್ನಾ ಪೂಜಾರಿ ಅವರಿಗೆ ತಲ್ಲೂರುಗ್ರಾ.ಪಂ.ಮಟ್ಟದಉತ್ತಮ ಶಿಕ್ಷಕ ಪ್ರಶಸ್ತಿ ನೀಡಿಗೌರವಿಸಲಾಯಿತು.ರಾಷ್ಟ್ರಹಾಗೂ ರಾಜ್ಯಮಟ್ಟದಲ್ಲಿ ಮಿಂಚಿದವಿದ್ಯಾರ್ಥಿಗಳಾದ ಅವನೀಶ್ ಪ್ರಸಾದ್ಕೆ.,ವಿಷ್ಣು,ಸದ್ವಿನ್ಎಸ್.ಆಚಾರ್ಯ,ನವ್ಯಶ್ರೀ,ವಂಶಿಕಾವಿ.ದೇವಾಡಿಗ,ಮನ್ವಿತಾಎಂ.ಪೂಜಾರಿ,ಗೌತಮ್ಅವರನ್ನು ಸನ್ಮಾನಿಸಲಾಯಿತು.ನನ್ನಕನಸಿನ ಪಂಚಾಯಿತಿ ಪ್ರಬಂಧ ಸ್ಪರ್ಧೆಯವಿಜೇತರಿಗೆ ಬಹುಮಾನ ನೀಡಲಾಯಿತು.

ಸಮಸ್ಯೆಗಳನ್ನುತೆರೆದಿಟ್ಟ ವಿದ್ಯಾರ್ಥಿಗಳು

ಕೋಟೆಬಾಗಿಲುಶಾಲೆಯನ್ನು ಮೇಲ್ದರ್ಜೆಗೇರಿಸಬೇಕು,ಶಾಲೆಯಆವರಣದಲ್ಲಿ ಮದ್ಯದ ಬಾಟಲಿ ಹಾಗೂಇಂಜೆಕ್ಷೆನ್ ಸಿರಿಂಜ್ ಹಾಕದಂತೆಕ್ರಮ ಕೈಗೊಳ್ಳಬೇಕು ಮತ್ತು ಮಂಗಗಳಹಾವಳಿ ಹೆಚ್ಚಿದ್ದು ನಿಯಂತ್ರಿಸಬೇಕುಎಂದು ಕೋಟೆಬಾಗಿಲು ಶಾಲೆಯವಿದ್ಯಾರ್ಥಿಗಳು ಆಗ್ರಹಿಸಿದರು.ಶಾಲೆಯಬಾವಿಯನ್ನು ಸ್ವಚ್ಛಗೊಳಿಸಬೇಕುಮತ್ತು ಶಾಲೆಯ ಗ್ರಂಥಾಲಯವನ್ನುವ್ಯವಸ್ಥಿತ ರೀತಿಯಲ್ಲಿ ಇಡಬೇಕುಎಂದು ಉಪ್ಪಿನಕುದ್ರು ಪ್ರೌಢಶಾಲೆವಿದ್ಯಾರ್ಥಿಗಳು ಒತ್ತಾಯಿಸಿದರು.

ಕೋಟೆಬಾಗಿಲುರಸ್ತೆ ಮತ್ತು ಪಾರ್ತಿಕಟ್ಟೆರಸ್ತೆ ಅಭಿವೃದ್ಧಿಪಡಿಸಬೇಕು,ಕೋಟೆಬಾಗಿಲಿಗೆಸಂಜೆ ವೇಳೆ ಬಸ್ ಸಂಚಾರ ಕಲ್ಪಿಸಬೇಕು,ತ್ಯಾಜ್ಯವಿಲೇವಾರಿ ಸಮಸ್ಯೆಯನ್ನುಪರಿಹರಿಸಬೇಕು,ತಲ್ಲೂರುಸರ್ಕಲ್‌ನಲ್ಲಿ ಟ್ರಾಫಿಕ್ಪೊಲೀಸರನ್ನು ನಿಯೋಜಿಸಬೇಕು,ಆಟದಮೈದಾನದಲ್ಲಿ ದನ ಕರುಗಳು ಬಾರದಂತೆಕ್ರಮಕೈಗೊಳ್ಳಬೇಕು.ರಾಜಾಡಿಯಲ್ಲಿಕುಡಿಯುವ ನೀರಿನ ಸಮಸ್ಯೆಯನ್ನುಬಗೆಹರಿಸಬೇಕು,ವಿದ್ಯುತ್ದಾರಿದೀಪದ ವ್ಯವಸ್ಥೆ ಮಾಡಬೇಕುಎಂದು ಸರ್ಕಾರಿ ಪ್ರಾಥಮಿಕ ಶಾಲೆವಿದ್ಯಾರ್ಥಿಗಳು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net