ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ರಾಜು ಶೆಟ್ಟಿ, ಸುಭಾಷ್ಚಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಕರುಣಾಕರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Published on:
Copied
Follow Us
ಬೆಳ್ತಂಗಡಿ: ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ತಿಳಿಸುವ ಅಗತ್ಯತೆ ತುಂಬಾ ಇದೆ. ಇದನ್ನು ನಾವು ನೀವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದು ಬಂಟರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದರು.
ಉಜಿರೆ ಶಾರದಾ ಮಂಟಪದಲ್ಲಿ ಸಮಸ್ತ ಬಂಟ ಸಮಾಜದ ಬಾಂಧವರ ಕೂಡುವಿಕೆಯಿಂದ ಬಂಟರ ಸಂಘ, ಉಜಿರೆ ಗ್ರಾಮ ಸಮಿತಿ ನೇತೃತ್ವದಲ್ಲಿ ಆಟಿಡೊಂಜಿ ದಿನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷರಾಗಿ ಆಯ್ಕೆಯಾದ ವಸುಧಾ ಪಿ.ಶೆಟ್ಟಿ ಹಾಗೂ ರವೀಂದ್ರ ಶೆಟ್ಟಿ ಸುರಭಿ, ನಿರ್ದೇಶಕರಾಗಿ ಆಯ್ಕೆಯಾದ ಉಜಿರೆ ವಲಯದ ಜಯಂತ್ ಶೆಟ್ಟಿ, ವೆಂಕಟರಮಣ ಶೆಟ್ಟಿ, ನಿರಂಜನ್ ಶೆಟ್ಟಿ, ವನಿತಾ ವಿ.ಶೆಟ್ಟಿ, ಪುರುಷೋತ್ತಮ ಶೆಟ್ಟಿ ಅವರನ್ನು ಗೌರವಿಸಲಾಯಿತು. ಉಜಿರೆಯಲ್ಲಿ ಅನಾರೋಗ್ಯ ಪೀಡಿತರಾಗಿರುವ ಸಮಾಜದ ಒಬ್ಬ ಸದಸ್ಯರಿಗೆ 10,000 ರೂ. ನೀಡಲಾಯಿತು.
ಬಂಟರ ಸಂಘ ಉಜಿರೆ ವಲಯದ ಸ್ಥಾಪಕ ಸದಸ್ಯ ರಾಜು ಶೆಟ್ಟಿ, ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಡಾ.ಕುಮಾರ ಹೆಗ್ಡೆ, ಸುರೇಶ್ ಶೆಟ್ಟಿ, ವಸಂತ್ ಶೆಟ್ಟಿ, ಡಾ.ಶಿವಪ್ರಸಾದ್ ಶೆಟ್ಟಿ, ರಘುರಾಮ್ ಶೆಟ್ಟಿ, ಸಾಧನಾ, ಜಯರಾಮ್ ಶೆಟ್ಟಿ, ಪವಿತ್ರಾ ಸುಕುಮಾರ್ ಶೆಟ್ಟಿ, ಸಂಜೀವ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಪುಷ್ಪಾವತಿ ಆರ್.ಶೆಟ್ಟಿ, ಅಜಿತ್ ಶೆಟ್ಟಿ, ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರೇಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಕುಮಾರ್ ಶೆಟ್ಟಿ ವಂದಿಸಿದರು. ಸೋನಾಕ್ಷಿ ಶೆಟ್ಟಿ ಮತ್ತು ಮನಿಶ್ ಶೆಟ್ಟಿ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.