ಸೌಕೂರು ಕೆತ್ತೆಮಕ್ಕಿ ರಸ್ತೆಯಲ್ಲಿ ಮಕ್ಕಳಿಂದ ಪ್ರತಿಭಟನೆ

 ಸೌಕೂರು- ಕೆತ್ತೆಮಕ್ಕಿ ರಸ್ತೆಯ ದುಸ್ಥಿತಿ ಖಂಡಿಸಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ರಸ್ತೆಯ ಕೆಸರುಮಯ ಭಾಗದಲ್ಲಿ ಸಸಿ ಮತ್ತು ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಸೌಕೂರು- ಕೆತ್ತೆಮಕ್ಕಿ ರಸ್ತೆಯ ದುಸ್ಥಿತಿ ಖಂಡಿಸಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ರಸ್ತೆಯ ಕೆಸರುಮಯ ಭಾಗದಲ್ಲಿ ಸಸಿ ಮತ್ತು ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
Published on
ಕುಂದಾಪುರ: ಗುಲ್ವಾಡಿ ಗ್ರಾಪಂ ವ್ಯಾಪ್ತಿಯ ಸೌಕೂರು ಕೆತ್ತೆಮಕ್ಕಿ ರಸ್ತೆಯ ದುಸ್ಥಿತಿ ಖಂಡಿಸಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ರಸ್ತೆಯ ಕೆಸರುಮಯ ಭಾಗದಲ್ಲಿ ಸಸಿ ಮತ್ತು ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಸೌಕೂರಿನಿಂದ ಕೆತ್ತೆಮಕ್ಕಿ ಮೂಲಕ ಕೌಂಜೂರು ಸಂಪರ್ಕಿಸುವ ರಸ್ತೆಯಲ್ಲಿ 2021-22ನೇ ಸಾಲಿನಲ್ಲಿ 400 ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದರೂ ಉಳಿದ 700 ಮೀ. ರಸ್ತೆ ಇನ್ನೂ ಅಭಿವೃದ್ಧಿಯಾಗಿಲ್ಲ. ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರುಮಯವಾಗಿ ವಾಹನ ಹಾಗೂ ಕಾಲ್ನಡಿಗೆ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ.

ಕೆತ್ತೆಮಕ್ಕಿ ಹಾಗೂ ಕೌಂಜೂರು ಭಾಗದಿಂದ ಸೌಕೂರು ಮತ್ತು ಕಂಡ್ಲೂರು ಶಾಲಾ- ಕಾಲೇಜುಗಳಿಗೆ ತೆರಳುವ 30ರಿಂದ 40 ವಿದ್ಯಾರ್ಥಿಗಳು ಪ್ರತಿ ನಿತ್ಯ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಪೇಟೆಗೆ ಕೆಲಸಕ್ಕೆ ತೆರಳುವವರು, ಕಾರ್ಖಾನೆ ಕಾರ್ಮಿಕರು ಹಾಗೂ ಸ್ಥಳೀಯರು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ನಿತ್ಯವೂ 80ಕ್ಕೂ ಮಿಕ್ಕಿ ವಾಹನಗಳ ಸಂಚಾರ ಇದೆ. ಈ ರಸ್ತೆಯುದ್ದಕ್ಕೂ 50ಕ್ಕೂ ಹೆಚ್ಚು ಮನೆಗಳಿದ್ದು, ಬಹುತೇಕ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುತ್ತಿವೆ. ರಸ್ತೆಯ ದುಸ್ಥಿತಿಯನ್ನು ತಕ್ಷಣ ಪರಿಶೀಲಿಸಿ, ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಸೌಕೂರಿನಿಂದ ಕೆತ್ತೆಮಕ್ಕಿ ಮೂಲಕ ಕೌಂಜೂರು ಸಂಪರ್ಕಿಸುವ ರಸ್ತೆಯು ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಗಿ ಸಂಚಾರಕ್ಕೆ ತೊಡಕಾಗುತ್ತಿದೆ. ಹಾಲಿ ಮತ್ತು ಮಾಜಿ ಶಾಸಕರಿಗೆ ಮನವಿ ಕೊಟ್ಟರೂ ಸ್ಪಂದನೆ ದೊರಕಿಲ್ಲ. ಈ ಭಾಗದ ನಿವಾಸಿಗಳ ಅನುಕೂಲಕ್ಕಾಗಿ ಸ್ಥಳೀಯಾಡಳಿತ ಶೀಘ್ರ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು.

— ಗೋಪಾಲ ದೇವಾಡಿಗ, ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net